ಕೊಡಿಪಾಡಿ ಕ್ಷೇತ್ರದಲ್ಲಿ ವೈಭವದ ಬ್ರಹ್ಮರಥೋತ್ಸವ-80 ವರ್ಷಗಳ ಬಳಿಕ ಸಂಭ್ರಮದ ಕ್ಷಣವನ್ನು ಕಣ್ತುಂಬಿಕೊಂಡ ಭಕ್ತ ಸಮೂಹ

0

ಪುತ್ತೂರು: ಮಧ್ವಚಾರ್ಯರು ತಪಃಗೈದ ಗಂಗಾ ಸಾನ್ನಿಧ್ಯವಿರುವ ಪರಮ ಪಾವನ ಕುಂಡಿಗೆ ತೀರ್ಥವಿರುವ ಪ್ರಸಿದ್ದವೂ, ಪುರಾತನವೂ ಆದ ಪಾವನ ಕ್ಷೇತ್ರ ಭಗವಾನ್ ಮಹಾವಿಷ್ಣು ನೆಲೆಸಿರುವ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನವೀಕರಣ, ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ, ಧ್ವಜಸ್ಥಂಭ ಪ್ರತಿಷ್ಠಾಪನೆ, ಬ್ರಹ್ಮರಥವು ಸಮರ್ಪಣೆ ಬಳಿಕ ಮಾ. 31ರಂದು ರಾತ್ರಿ ವೈಭವದ ಬ್ರಹ್ಮರಥೋತ್ಸವ ನಡೆಯಿತು. ಇಲ್ಲಿ ಸುಮಾರು 80 ವರುಷಗಳ ಬಳಿಕ ಶ್ರೀದೇವರ ವೈಭವದ ಬ್ರಹ್ಮರಥೋತ್ಸವವು ನಡೆದಿದ್ದು, ಸಾವಿರಾರು ಭಕ್ತರು ಈ ಸಂಭ್ರಮವನ್ನು ಕಣ್ತುಂಬಿಸಿಕೊಂಡರು.


ಮಾ.31ರಂದು ಬೆಳಿಗ್ಗೆ ಗಂಟೆ 8 ರಿಂದ ಶ್ರೀದೇವರ ಬಲಿ ಹೊರಟು ಉತ್ಸವ, ನವಕ ಕಲಶ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಅಪ್ಪಂಗಾಯಿ. ಬೆಳಿಗ್ಗೆ ಗಂಟೆ 10 ರಿಂದ ನವಕ ಕಲಶಾಭಿಷೇಕ ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ. ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ರಾತ್ರಿ ಗಂಟೆ 7ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ಬ್ರಹ್ಮರಥೋತ್ಸವ, ಸುಡುಮದ್ದು ಪ್ರದರ್ಶನ, ಮಹಾಪೂಜೆ, ಶ್ರೀ ಭೂತಬಲಿ ಉತ್ಸವ, ಶಯನೋತ್ಸವ, ಕವಾಟ ಬಂಧನ, ಅನ್ನಸಂತರ್ಪಣೆ ನಡೆಯಿತು. ಊರಪರವೂರ ಸಾವಿರಾರು ಮಂದಿ ಭಕ್ತಾಧಿಗಳು ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಭಾಗವಹಿಸಿ ದೇವರ ದರುಶಣ ಪಡೆದು ಅನ್ನಪ್ರಸಾದ ಸ್ವೀಕರಿಸಿದರು. ಸ್ಥಳದಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಕೈಗೊಂಡಿದ್ದರು.


ಇಂದು ಕ್ಷೇತ್ರದಲ್ಲಿ: ಏ.1ರಂದು ಬೆಳಗ್ಗೆ ಗಂಟೆ ೬ಕ್ಕೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ತೈಲಾಭಿಷೇಕ, ಪಂಚಾಮೃತಾಭಿಷೇಕ ಬೆಳಿಗ್ಗೆ ಗಂಟೆ 10ಕ್ಕೆ ಯಾತ್ರಾಹೋಮ ನಡೆಯಿತು.
ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 6 ಶ್ರೀ ದೇವರ ಬಲಿ ಹೊರಟು ಆರಾಟ ಮಹೋತ್ಸವ, ಬಟ್ರುಪ್ಪಾಡಿ ಕೆರೆಯಲ್ಲಿ ಅವಭ್ರತ ಸ್ನಾನ, ದೇವರು ಕ್ಷೇತ್ರ ತಲುಪಿದ ಬಳಿಕ ಧ್ವಜಾವರೋಹಣ, ಮಹಾಪೂಜೆ, ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here