ಎತ್ತುಗಲ್ಲು ಪಡಾರು ಹಿ.ಪ್ರಾ ಶಾಲಾ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

0

ವಿಟ್ಲ: ಎತ್ತುಗಲ್ಲು ಹಿ.ಪ್ರಾ ಶಾಲಾ ಹಳೆ ವಿದ್ಯಾರ್ಥಿ ಸಂಘ ರಚನೆಯು ಶಾಲೆಯಲ್ಲಿ ನಡೆದ ಹಳೆ ವಿದ್ಯಾರ್ಥಿ ಸಂಘದ ಸಭೆಯಲ್ಲಿ ನಡೆಯಿತು.

ಹಳೆ ವಿದ್ಯಾರ್ಥಿ ಸಂಘದ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಮುಂದಿನ ಎರಡು ವರ್ಷಗಳ ಅವಧಿಗೆ ಈ ಕೆಳಗಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಶಿ ಭಟ್ ಪಡಾರು, ಗೌರವ ಅಧ್ಯಕ್ಷರಾಗಿ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಜಯಭಾರತಿ, ಉದಯನಾರಾಯಣ ಭಟ್ ಎತ್ತುಗಲ್ಲು, ಉಪಾಧ್ಯರಾಗಿ ವೆಂಕಪ್ಪ ಸಪಲ್ಯ ಎತ್ತುಗಲ್ಲು, ಹರಿಣಾಕ್ಷ ಪೂಜಾರಿ ಚೆಂಬರಡ್ಕ, ಪ್ರಧಾನ ಕಾರ್‍ಯದರ್ಶಿಯಾಗಿ ಕಿಶೋರ್ ಶೆಟ್ಟಿ ಪಡಾರು, ಜೊತೆ ಕಾರ್ಯದರ್ಶಿ ರವಿಕೃಷ್ಣ ಭಟ್ ಎತ್ತುಗಲ್ಲು, ಕೋಶಾಧಿಕಾರಿ ವಿಜಯ್ ಗೌಡ ಪಡಾರು, ಗೌರವ ಸಲಹೆಗಾರರಾಗಿ ಚಂದ್ರಿಕ ಪಡಾರು, ಗ್ರೇಸಿ ಡಿಸೋಜ, ಪವಿತ್ರ, ಮಮತಾ, ಮೋಹಿನಿರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here