ಎ.6 : ಪಾದೆಬಂಬಿಲ ಶ್ರೀ ದುರ್ಗಾಭಜನಾ ಮಂದಿರದಲ್ಲಿ 24ನೇ ವರ್ಷದ ಶನೈಶ್ಚರ ಪೂಜೆ,ಆಮಂತ್ರಣ ಬಿಡುಗಡೆ

0

ಸವಣೂರು : ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿ ನಗರ ಶ್ರೀ ದುರ್ಗಾಭಜನಾ ಮಂಡಳಿಯ ವತಿಯಿಂದ ಎ.6ರಂದು ನಡೆಯಲಿರುವ 24ನೇ ವರ್ಷದ ಶನೈಶ್ಚರ ಪೂಜೆ ಹಾಗೂ ಭಗವದ್ಗೀತೆ ಪಾರಾಯಣ ,ಅರ್ಧ ಏಕಾಹ ಭಜನೆಯ ಆಮಂತ್ರಣ ಬಿಡುಗಡೆ ಶ್ರೀದುರ್ಗಾ ಭಜನಾ ಮಂದಿರದಲ್ಲಿ ನಡೆಯಿತು.

ಆಮಂತ್ರಣವನ್ನು ಭಜನಾ ಮಂದಿರದ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ಹಾಗೂ ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ಅವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here