ಪುತ್ತೂರು ಬದ್ರಿಯಾ ಜುಮ್ಮಾ ಮಸೀದಿಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್

0

ಬಡವರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಬಡವರ ಬಂಧು ಪದ್ಮರಾಜ್ ಆರ್: ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರು ಬದ್ರಿಯಾ ಜುಮ್ಮಾ ಮಸೀದಿಗೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ ನೀಡಿದರು. ಅಬ್ಬಾಸ್ ಫೈಝಿ ಪುತ್ತಿಗೆ ಪ್ರಾರ್ಥನೆ ನೆರವೇರಿಸಿ, ಪದ್ಮರಾಜ್ ಗೆಲುವಿಗೆ ಶುಭಹಾರೈಸಿದರು.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ನಮ್ಮ ಅಭ್ಯರ್ಥಿ ಪೇಟೆಯಲ್ಲಿ ಬೆಳೆದವರಲ್ಲ. ಹಳ್ಳಿಯ ಜೀವನ ಕಂಡವರು. ಕಷ್ಟ, ಬಡತನದಲ್ಲೇ ಬೆಳೆದು ಬಂದಿದ್ದಾರೆ. ಆದ್ದರಿಂದ ಜನರ ಸಮಸ್ಯೆಗಳಿಗೆ ಸರಿಯಾದ ಸ್ಪಂದನೆ ಮಾಡುವವರು. ಆದ್ದರಿಂದ ಅವರನ್ನು ಗೆಲ್ಲಿಸಿಕೊಡಬೇಕು. ಇದಕ್ಕಾಗಿ ಗ್ಯಾರೆಂಟಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ. ನೀವೆಲ್ಲಾ ಜನರ ಮನೆಗೆ ಹೋಗಿ, ಮತ ಕೇಳಿದ ಕಾರಣ ನಾನು ಶಾಸಕನಾಗುವಂತಾಯಿತು. ಅದೇ ರೀತಿ ಪದ್ಮರಾಜ್ ಅವರನ್ನು ಅತ್ಯಧಿಕ ಮತದಿಂದ ಗೆಲ್ಲಿಸಿಕೊಡಬೇಕು ಎಂದರು.

ಅಭ್ಯರ್ಥಿ ಪದ್ಮರಾಜ್ ಆರ್. ಮಾತನಾಡಿ, ಚುನಾವಣೆ ಎಂದ ಮಾತ್ರಕ್ಕಷ್ಟೇ ಎಲ್ಲಾ ಪ್ರಾರ್ಥನಾಲಯಗಳಿಗೆ ತೆರಳುತ್ತಿಲ್ಲ. ಇತರ ಸಮಯದಲ್ಲೂ ಎಲ್ಲಾ ಪ್ರಾರ್ಥನಾ ಕೇಂದ್ರಗಳಿಗೆ ತೆರಳುವ ಸಂಪ್ರದಾಯ ಬೆಳೆಸಿಕೊಂಡವನು ನಾನು. ಈ ಚುನಾವಣೆಯ ಮೂಲಕ ಎಲ್ಲಾ ಜನರ ಸೇವೆ ಮಾಡುವ ಭಾಗ್ಯ ಸಿಗುವಂತಾಗಲಿ ಎಂದರು.ಮಸೀದಿ ಸಮಿತಿ ಅಧ್ಯಕ್ಷ ಎಲ್.ಟಿ. ರಝಾಕ್ ಹಾಜಿ ಮಾತನಾಡಿ, ಉತ್ತಮ ಅಭ್ಯರ್ಥಿ ನಮಗೆ ಲಭಿಸಿದ್ದಾರೆ. ಜಾತಿ, ಮತ, ಬೇಧ ನೋಡದೇ ಅವರನ್ನು ಗೆಲ್ಲಿಸಿಕೊಡಬೇಕು ಎಂದರು.

ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ. ವಿಶ್ವನಾಥ ರೈ, ಡಾ. ರಾಜಾರಾಮ್, ಕಾರ್ಯದರ್ಶಿ ಯಕೂಬ್ ಖಾನ್, ನೂರುದ್ದೀನ್ ಸಾಲ್ಮಾರ, ಹಸನ್ ಹಾಜಿ, ಶಕೂರ್ ಹಾಜಿ, ಎಂ.ಎಸ್. ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here