ಜಿ.ಎಲ್.ಒನ್ ಮಾಲ್‌ನಲ್ಲಿ “ಮಂಗಲ್ ಹೈಪರ್ ಮಾರ್ಕೆಟ್” ಶುಭಾರಂಭ

0

ಶುಭ “ಮಂಗಲ” ಶಾಪಿಂಗ್ ಅನುಭವದ “ನಮ್ಮ ಊರಿನ ನಿಮ್ಮ ಅಂಗಡಿ”

ಪುತ್ತೂರು: ಕಳೆದ ಹಲವಾರು ವರುಷಗಳಿಂದ ಗುಣಮಟ್ಟ ಮತ್ತು ವಿಶ್ವಾಸಾರ್ಹ ಸೇವೆಯ ಮೂಲಕ ಗ್ರಾಹಕರ ಮನಗೆದ್ದಿರುವ ನಗರದ ಹೊರವಲಯದಲ್ಲಿರುವ ಮಂಜಲ್ಪಡ್ಪುವಿನಲ್ಲಿ ವ್ಯವಹರಿಸುತ್ತಿರುವ ಮಂಗಲ್ ಸ್ಟೋರ್ಸ್‌ನ ನೂತನ ಮಳಿಗೆ “ಮಂಗಲ್ ಹೈಪರ್ ಮಾರ್ಕೆಟ್” ಪುತ್ತೂರಿನ ಹೃದಯ ಭಾಗದಲ್ಲಿರುವ ಜಿ.ಎಲ್.ಒನ್ ಮಾಲ್‌ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು. ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಮಾಸ್ಟರ್ ಪ್ಲಾನರಿಯ ಆಡಳಿತ ನಿರ್ದೇಶಕ ಎಸ್. ಕೆ ಆನಂದ್ ಮತ್ತು ಜಿಎಲ್.ಒನ್ ಮಾಲ್‌ನ ಮಾಲಕ ಬಲರಾಮ ಆಚಾರ್ಯರವರು ದೀಪ ಪ್ರಜ್ವಲಿಸಿದರು.

ಮಾಲ್ ಪರಿಪೂರ್ಣತೆಗೆ ಹೈಪರ್ ಮಾರ್ಕೆಟ್ ಅವಶ್ಯ – ಬಲರಾಮ ಆಚಾರ್ಯ:
ಬಲರಾಮ ಆಚಾರ್ಯ ಮಾತನಾಡಿ, ಜಿ.ಎಲ್.ಒನ್ ಮಾಲ್ ಆರಂಭಗೊಂಡು ಇಂದಿಗೆ ಒಂದು ವರ್ಷ ಪೂರ್ಣವಾಗಿದೆ. ಕಾಕತಾಳೀಯವೆಂಬಂತೆ ಇಂದು ಹೈಪರ್ ಮಾರ್ಕೆಟ್ ಆರಂಭಗೊಂಡಿದೆ. ಇಲ್ಲಿಗೆ ಹೈಪರ್ ಮಾರ್ಕೆಟ್ ಬರಬೇಕೆಂದು ಪ್ರಯತ್ನಪಟ್ಟಿದ್ದೆವು. ಹೊಸ ಅವಕಾಶ ಹುಟ್ಟಿಕೊಂಡು ಹೈಪರ್ ಮಾರ್ಕೆಟ್ ಶುಭಾರಂಭಗೊಂಡಿದೆ. ಮಾಲ್ ಪರಿಪೂರ್ಣವಾಗಿ ಇರಬೇಕಾದರೆ ಒಂದು ಹೈಪರ್ ಮಾರ್ಕೆಟ್ ಅವಶ್ಯಕತೆ ಇದೆ. ಇದು ಎಲ್ಲಾ ಗ್ರಾಹಕರಿಗೆ ಉಪಯುಕ್ತವಾಗಲಿ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.

ದಾನ ಧರ್ಮ ಮಾಡಲು ಮನಸ್ಸು ಬೇಕು – ಪಂಜಿಗುಡ್ಡೆ ಈಶ್ವರ ಭಟ್:
ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ನಮಗೆಲ್ಲರಿಗೂ ತುಂಬಾ ಸಂತೋಷವಾಗಿದೆ. ಬಲರಾಮ ಆಚಾರ್ಯರವರು ನಗರದ ಹೃದಯ ಭಾಗದಲ್ಲಿ ವ್ಯವಸ್ಥಿತವಾಗಿ ಮಾಲ್ ನಿರ್ಮಾಣ ಮಾಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲಾ ಸಾಮಾಗ್ರಿಗಳು ಮಂಗಲ್ ಹೈಪರ್ ಮಾರ್ಕೆಟ್‌ನಲ್ಲಿ ಲಭ್ಯವಿದೆ. ದಾನ ಧರ್ಮ ಮಾಡಲು ಮನಸ್ಸು ಬೇಕು. ಇಲ್ಲಿ ಪ್ರಜ್ವಲಿಸಿದ ಬೆಳಕು ಎಲ್ಲರಿಗೂ ಸಿಕ್ಕಿದೆ ಎಂದು ಹೇಳಿ ಶುಭಹಾರೈಸಿದರು.

ಮಾಸ್ಟರ್ ಪ್ಲಾನರಿಯಿಂದ ಕ್ರಾಂತಿಕಾರಕ ಹೆಜ್ಜೆ-ಸತ್ಯಶಂಕರ್ ಭಟ್:
ಎಸ್.ಜಿ ಗ್ರೂಫ್ ಆಫ್ ಕಂಪೆನಿಯ ಆಡಳಿತ ನಿರ್ದೇಶಕ ಸತ್ಯಶಂಕರ ಭಟ್ ಮಾತನಾಡಿ, ಕ್ರಾಂತಿಕಾರಕ ಹೆಜ್ಜೆಗಳನ್ನು ಮಾಸ್ಟರ್ ಪ್ಲಾನರಿಯವರು ಇಟ್ಟಿದ್ದಾರೆ. ಪುತ್ತೂರಲ್ಲಿ ಪ್ರಾರಂಭವಾದ ಹೈಪರ್ ಮಾರ್ಕೆಟ್ ಸಂಸ್ಥೆ ದೇಶದಾದ್ಯಂತ ಪಸರಿಸಲಿ. ಮಂಗಲ್ ಬ್ರ್ಯಾಂಡ್ ಯಶಸ್ಸು ಕಾಣಲಿ ಎಂದು ಹಾರೈಸಿದರು.

ಪುತ್ತೂರಿನ ಜನತೆಗೆ ಉಪಯೋಗವಾಗಲಿ-ಎಸ್.ಕೆ.ಆನಂದ್:
ಎಸ್.ಕೆ.ಆನಂದ್ ಮಾತನಾಡಿ, ಹೈಪರ್ ಮಾರ್ಕೆಟ್‌ನಲ್ಲಿ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಬಹುದು. ಪುತ್ತೂರಿನ ಜನತೆಗೆ ಉಪಯೋಗವಾಗಲಿ ಎಂದು ಮಾರ್ಕೆಟ್ ಆರಂಭಿಸಿದ್ದೇವೆ. ಎಲ್ಲರೂ ಸಹಕರಿಸಿ ಎಂದರು.

ಒಂದು ಪಾಲು ಸಮಾಜಕ್ಕೆ ಸಮರ್ಪಣೆ-ರಾಧಾಕೃಷ್ಣ ಭಟ್:
ಕೊಡಿಪ್ಪಾಡಿ ಶ್ರೀಜನಾರ್ದನ ದೇವಸ್ಥಾನದ ಮೊಕ್ತೇಸರ ರಾಧಾಕೃಷ್ಣ ಭಟ್ ಮಾತನಾಡಿ, ನಾವು ಸಮಾಜದಿಂದ ಏನು ಪಡೆದಿದ್ದೇವೆಯೋ ಅದರಲ್ಲಿ ಒಂದು ಪಾಲು ಸಮಾಜಕ್ಕೆ ಅರ್ಪಣೆ ಮಾಡಬೇಕು ಎಂಬ ಉದ್ಧೇಶದಿಂದ ಹೈಪರ್ ಮಾರ್ಕೆಟ್ ಆರಂಭಗೊಂಡಿದೆ. ದೀಪ ಬೆಳಗಿದ ಹಾಗೆ ಎಲ್ಲರ ಬದುಕು ಪ್ರಜ್ವಲಿಸಲಿ ಎಂದು ಹಾರೈಸಿದರು. ಪಾಂಡುರಂಗ ನಾಯಕ್ ಪ್ರಾರ್ಥಿಸಿದರು. ಮಾಸ್ಟರ್ ಪ್ಲಾನರಿಯ ಆಕಾಶ್ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಚಂದ್ರಹಾಸ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮಾಸ್ಟರ್ ಪ್ಲಾನರಿಯ ರೇಖಾ ಆನಂದ್, ಅರ್ಜುನ್, ಅಕ್ಷಯ್, ಜಿ.ಎಲ್.ಸಮೂಹ ಸಂಸ್ಥೆಗಳ ರಾಜೀ ಬಲರಾಮ ಆಚಾರ್ಯ, ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯ, ಎಸ್.ಜಿ.ಗ್ರೂಫ್ ಆಫ್ ಕಂಪೆನಿಯ ರಂಜಿತಾ ಶಂಕರ್, ಮಂಗಲ್ ಸ್ಟೋರ್ಸ್‌ನ ರಾಘವೇಂದ್ರ ನಾಯಕ್, ಸುದರ್ಶನ್ ನಾಯಕ್, ತಿಮ್ಪಪ್ಪಯ್ಯ, ಅರುಣ ನಾಯಕ್, ಕಿರಣ್ ಶ್ಯಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಲಕ್ಕೀ ಡ್ರಾ.ದಲ್ಲಿ ಎ.5ರವರೆಗೆ ಗಿಫ್ಟ್ ವೋಚರ್ ಪಡೆಯುವ ಅವಕಾಶ
ಶುಭಾರಂಭದ ಪ್ರಯುಕ್ತ ಕೂಪನ್ ಭರ್ತಿ ಮಾಡಿ ಗಿಫ್ಟ್‌ಗಳನ್ನು ಗೆಲ್ಲುವ ಅವಕಾಶವನ್ನು ಆಯೋಜಿಸಲಾಗಿದೆ. ಗ್ರಾಹಕರ ಹೆಸರಿನೊಂದಿಗೆ ಸಂಪೂರ್ಣವಾಗಿ ಭರ್ತಿ ಮಾಡಿದ ಕೂಪನ್‌ಗಳನ್ನು ಮಳಿಗೆಯಲ್ಲಿ ಇರಿಸಲಾದ ಲಕ್ಕಿ ಬಾಕ್ಸ್‌ನಲ್ಲಿ ಎ.5ರ ಮೊದಲು ಹಾಕಲು ಅವಕಾಶ ನೀಡಲಾಗಿದೆ. ಎ.10ರಂದು ಡ್ರಾ. ನಡೆಯಲಿದ್ದು ಅದೃಷ್ಟಶಾಲಿಗಳು ರೂ.2000, 1000 ಹಾಗೂ ರೂ.500 ಮೌಲ್ಯದ ಶಾಪಿಂಗ್ ವೋಚರ್‌ಗಳನ್ನು ಗೆಲ್ಲುವ ಅವಕಾಶವಿದೆ.

2011ರಲ್ಲಿ ಪ್ರಾರಂಭವಾದ ಮಂಗಲ್ ಸ್ಟೋರ್ಸ್‌ನ ಮೂರನೇ ಶಾಖೆ ಜಿ.ಎಲ್.ಒನ್ ಮಾಲ್‌ನಲ್ಲಿ ಶುಭಾರಂಭಗೊಂಡಿದೆ. ಗ್ರಾಹಕರಿಗೆ ಉತ್ತಮ ಸೇವೆ ಕೊಡುವುದು ನಮ್ಮ ಧ್ಯೇಯವಾಗಿದೆ. ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಎಲ್ಲಾ ಸಾಮಾಗ್ರಿಗಳು ಮಾರ್ಕೆಟ್‌ನಲ್ಲಿ ಲಭ್ಯವಿದೆ. ಗ್ರಾಹಕರ ಸಹಕಾರದಿಂದ ನಾವು ಈ ಹಂತಕ್ಕೆ ಬೆಳೆದಿದ್ದೇವೆ.
ರಾಘವೇಂದ್ರ ನಾಯಕ್ ,ಮಂಗಲ್ ಸ್ಟೋರ್ಸ್

ನಮ್ಮ ಜಿ.ಎಲ್.ಒನ್ ಮಾಲ್‌ಗೆ ಪರಿಪೂರ್ಣವಾದ ಮಾರ್ಕೆಕ್. ಇಲ್ಲಿ ಸ್ಥಳೀಯ, ಲೋಕಲ್ ಹಾಗೂ ದೇಶಿಯ ಬ್ರ್ಯಾಂಡ್‌ಗಳು ಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಿ
ಸುದನ್ವ ಆಚಾರ್ಯ ,ಜಿ.ಎಲ್.ಸಮೂಹ ಸಂಸ್ಥೆಗಳು

LEAVE A REPLY

Please enter your comment!
Please enter your name here