ಪುತ್ತೂರು : ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ 2023-24 ನೇ ಶೈಕ್ಷಣಿಕ ವರ್ಷದ ಸ್ಕೌಟ್ ಮತ್ತು ಗೈಡ್ ಬೇಸಿಗೆ ಶಿಬಿರವನ್ನು, ಮಾರ್ಚ್ 21ನೇ ತಾರೀಕಿನಿಂದ 24ನೇ ತಾರೀಕಿನ ವರೆಗೆ, 4ದಿನಗಳ ಕಾಲ, ಸ್ಕೌಟಿಂಗ್ ನಿಯಮದಂತೆ ಹಮ್ಮಿಕೊಳ್ಳಲಾಯಿತು.ಮೊದಲನೇ ದಿನದಂದು, ಪುತ್ತೂರು ಸಂಚಾರ ಠಾಣೆಯ ಸಿಬ್ಬಂದಿಗಳಾದ ಶ್ರೀ ದಿನೇಶ್ ಹಾಗೂ ಶ್ರೀ ವಿನಯ್ ಇವರು, ರಸ್ತೆ ಸುರಕ್ಷತಾ ನಿಯಮಗಳನ್ನು, ಪ್ರಾತ್ಯಕ್ಷಿಕೆ ಮೂಲಕ ಶಾಲಾ ಆವರಣದಲ್ಲಿ ನಡೆಸಿಕೊಟ್ಟರು.
ಎರಡನೇ ದಿನದಂದು, ಮತದಾನ ಜಾಗೃತಿ ಜಾಥಾವನ್ನು ವಿವೇಕಾನಂದ ವಿದ್ಯಾಸಂಸ್ಥೆಯ ಆವರಣದೊಳಗೆ ಹಾಗೂ ನಗರದ ಸುತ್ತಮುತ್ತ ಕೈಗೊಳ್ಳಲಾಯಿತು.ಮೂರನೇ ದಿನದಂದು ಪೂರ್ವಾಹ್ನ ಪರಿಸರ ಸ್ನೇಹಿ ಕೈಗಾರಿಕಾ ಘಟಕ ವೀಕ್ಷಣೆಗೆ ಹಾಗೂ ಅಪರಾಹ್ನದ ಅವಧಿಯಲ್ಲಿ ನಗರದ ಹೊರವಲಯದಲ್ಲಿರುವ ಬಿರುಮಲೆ ಬೆಟ್ಟದ ಮೇಲಿರುವ ಸಾಲು ಮರದ ತಿಮ್ಮಕ್ಕ ಉದ್ಯಾನವನಕ್ಕೆ ಶಿಬಿರಾರ್ಥಿಗಳನ್ನು ಹೊರ ಸಂಚಾರಕ್ಕಾಗಿ ಕರೆದೊಯ್ಯಲಾಯಿತು. ಅದೇ ದಿನ ರಾತ್ರಿ ಶಿಬಿರಾಗ್ನಿ ಹಾಗೂ ಆಕಾಶ ವೀಕ್ಷಣೆ ಕಾರ್ಯಕ್ರಮವನ್ನು ಶಾಲಾ ಸಂಚಾಲಕ ಭರತ್ ಪೈ ಅವರು ನಡೆಸಿಕೊಟ್ಟರು.
ಮಾ.23ರಂದು ಸರ್ವಧರ್ಮ ಪ್ರಾರ್ಥನೆ, ಧ್ವಜ ಸಮಾರಂಭ, , ಧ್ವಜಾರೋಹಣ ಹಾಗೂ ಸ್ವಚ್ಛತಾ ಕಾರ್ಯಕ್ರಮದೊಂದಿಗೆ ಬೇಸಿಗೆ ಶಿಬಿರವು ಸಂಪನ್ನಗೊಂಡಿತು. ಈ ಎಲ್ಲಾ ಕಾರ್ಯಕ್ರಮಗಳನ್ನು ಸ್ಕೌಟ್ಸ್ ಮತ್ತು ಗೈಡ್ ಶಿಕ್ಷಕ ರಮೇಶ್ ಮತ್ತು ಪ್ರಪುಲ್ಲ ಇವರು ನೆರವೇರಿಸಿಕೊಟ್ಟರು.