ಕುಂಜೂರು ಪಂಜ ಸರಣಿ ಅಪಘಾತ-ಬೈಕ್ ಸವಾರನಿಗೆ ಗಾಯ

0

ಪುತ್ತೂರು: ಪುತ್ತೂರು-ಬೆಳಿಯೂರುಕಟ್ಟೆ ರಸ್ತೆಯ ಕುಂಜೂರುಪಂಜ ಎಂಬಲ್ಲಿ ನಾಲ್ಕು ವಾಹನಗಳ ಮಧ್ಯೆ ನಡೆದ ಸರಣಿ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಎ.1ರಂದು ಸಂಜೆ ನಡೆದಿದೆ.


ಆರ್ಯಾಪು ಗ್ರಾಮದ ಕುಂಜೂರುಪಂಜ ಭಜನಾ ಮಂದಿರದ ಮುಂಭಾಗದ ರಸ್ತೆಯಲ್ಲಿ ಮಾರುತಿ ಡಿಝೈರ್ ಕಾರಿಗೆ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಈ ಅಪಘಾದಲ್ಲಿ ಬೈಕ್ ಸವಾರ ಪುಣಚ ಗ್ರಾಮದ ಆಜೇರು ಕುಲ್ಲಾಜೆ ಬಾಲಕೃಷ್ಣ ರವರು ಗಾಯಗೊಂಡು ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಬಂದ ಜೀಪೊಂದು ಬ್ರೇಕ್ ವೈಫಲ್ಯಗೊಂಡು ಎದುರಿನಿಂದ ಬಂದ ಹೋಂಡಾ ಆಕ್ಟೀವಾಗೆ ಡಿಕ್ಕಿ ಹೊಡೆದಿದೆ.


ಮಾನವೀಯತೆ ಮೆರೆದ ಅಕ್ಷತ್ ಹಾಗೂ ನವೀನ್: ಅಪಘಾತದಿಂದ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರೂ ಬೈಕ್ ಸವಾರನನ್ನು ಆಸ್ಪತ್ರೆಗೆ ಕರೆ ತರಲು ಯಾರೂ ಮುಂದಾಗಲಿಲ್ಲ. ಈ ವೇಳೆಗೆ ಅದೇ ರಸ್ತೆಯಾಗಿ ಬಂದ ಪರ್ಲಡ್ಕ ಜಿ.ಕೆ ಶಾಮಿಯಾನದ ಅಕ್ಷತ್ ಹಾಗೂ ನವೀನ್ ಕುಂಜೂರುಪಂಜರವರು ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here