ಮದರಸ ಪಬ್ಲಿಕ್ ಪರೀಕ್ಷೆ: ಮೈದಾನಿಮೂಲೆ ಮದರಸಕ್ಕೆ ಶೇ.100 ಫಲಿತಾಂಶ

0

ಪುತ್ತೂರು: ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ನಡೆಸಿದ 2023-24ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಮೈದಾನಿಮೂಲೆ ಹಯಾತುಲ್ ಇಸ್ಲಾಮ್ ಮದರಸದ 5,7 ಹಾಗೂ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು ಮದ್ರಸಕ್ಕೆ ಶೇ.100 ಫಲಿತಾಂಶ ಬಂದಿದೆ.

10ನೇ ತರಗತಿಯ ಫಾತಿಮತ್ ನಶ್‌ವೀಫ 400ರಲ್ಲಿ 356 ಅಂಕ ಪಡೆದು ಎ ಗ್ರೇಡ್ ಹಾಗೂ 7ನೇ ತರಗತಿಯ ಫಾತಿಮತ್ ಮುನವ್ವರ 600ರಲ್ಲಿ 593 ಅಂಕ ಪಡೆದು ಪ್ರಥಮ ಸ್ಥಾನ, ಆಯಿಶತು ರಫೀಫ 600ರಲ್ಲಿ 584 ಅಂಕ ಪಡೆದು ದ್ವಿತೀಯ ಸ್ಥಾನ, ಆಯಿಶತು ನ್ನಾಫಿಹ 600ರಲ್ಲಿ 580 ಅಂಕ ಪಡೆದು ತೃತೀಯ ಸ್ಥಾನ ಪಡೆದು ಎ++ ಗ್ರೇಡ್ ಪಡೆದಿದ್ದಾರೆ. 5ನೇ ತರಗತಿಯಲ್ಲಿ ಇಬ್ರಾಹಿಂ ನವಾಫ್ 600ರಲ್ಲಿ 550 ಅಂಕ ಪಡೆದು ಪ್ರಥಮ ಸ್ಥಾನಿಯಾಗಿ ಎ ಗ್ರೇಡ್ ಪಡೆದಿದ್ದಾರೆ. ಮುಹಮ್ಮದ್ ಸಾಹಿಲ್ 600ರಲ್ಲಿ 547 ಅಂಕ ಪಡೆದು ದ್ವಿತೀಯ ಸ್ಥಾನ, ಫಾತಿಮ ಶಮ್ಲ 600ರಲ್ಲಿ 484 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಮೈದಾನಿಮೂಲೆ ಹಯಾತುಲ್ ಇಸ್ಲಾಂ ಮದರಸದ ಸದರ್ ಉಸ್ತಾದ್ ಫಾರೂಕ್ ಮದನಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here