ರಾಮಕುಂಜ: ತವರು ಮನೆಯಲ್ಲಿ ಮಹಿಳೆ ಆತ್ಮಹತ್ಯೆ

0

ರಾಮಕುಂಜ: ತವರು ಮನೆಯಲ್ಲಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎ.2ರಂದು ರಾಮಕುಂಜದಲ್ಲಿ ನಡೆದಿದೆ.
ರಾಮಕುಂಜ ಗ್ರಾಮದ ಕಂಪ ನಿವಾಸಿ ದೇವಪ್ಪ ಮೂಲ್ಯ ಅವರ ಪುತ್ರಿ ವನಿತಾ(38ವ.)ಆತ್ಮಹತ್ಯೆ ಮಾಡಿಕೊಂಡವರು. ವನಿತಾ ಅವರಿಗೆ 3 ವರ್ಷದ ಗಂಡು ಮಗು ಇದ್ದು, ಮೂರುವರೇ ತಿಂಗಳ ಹಿಂದೆ 2ನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಈ ಹೆಣ್ಣು ಮಗುವಿಗೆ ಎರಡೂವರೇ ತಿಂಗಳಾಗಿದ್ದಾಗ ಎದೆ ಹಾಲು ಉಣಿಸುವ ಸಮಯದಲ್ಲಿ ಹೆಣ್ಣು ಮಗುವು ಆಕಸ್ಮಿಕವಾಗಿ ಮೃತಪಟ್ಟಿತ್ತು. ಈ ವಿಚಾರವಾಗಿ ವನಿತಾರವರು ಮಾನಸಿಕವಾಗಿ ತುಂಬಾ ನೊಂದುಕೊಂಡು ಖಿನ್ನತೆಗೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ವನಿತಾರವರಿಗೆ ಮಾನಸಿಕ ಚಿಕಿತ್ಸೆಕೊಡಿಸುವರೇ ಅವರ ಪತಿ ಮಾ.4ರಂದು ತಾಯಿ ಮನೆಯಾದ ರಾಮಕುಂಜಕ್ಕೆ ಕರೆತಂದು ಬಿಟ್ಟು ಹೋಗಿದ್ದರು. ಎ.2ರಂದು ಬೆಳಿಗ್ಗೆ ವನಿತಾರವರ ತಾಯಿ ಕೃಷ್ಣಮ್ಮರವರು ದನ ಕಟ್ಟಿ ಹಾಕಲು ತೋಟಕ್ಕೆ ಹೋಗಿದ್ದು ಸಹೋದರ ದಿವಾಕರ ಅವರು ಡಿಪ್ಪೋಗೆ ಹಾಲು ಹಾಕುವರೇ ಕೊಯಿಲಕ್ಕೆ ಹೋದವರು ವಾಪಸ್ಸು ಮನೆಗೆ ಬಂದಾಗ ವನಿತಾರವರು ಮನೆಯ ಒಳಗಿನ ಕೋಣೆಯ ಮರದ ಅಡ್ಡಕ್ಕೆ ಸೀರೆಯನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ. ಈ ಬಗ್ಗೆ ವನಿತಾ ಅವರ ಸಹೋದರ ದಿವಾಕರ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here