ಉಪ್ಪಿನಂಗಡಿ ಶ್ರೀ ಗುರುರಾಘವೇಂದ್ರರ ಮಠದ ಬ್ರಹ್ಮಕಲಶಾಭಿಷೇಕ ಮಹೋತ್ಸವ-ಧಾರ್ಮಿಕ ಸಭೆ

0

ಭಗವಂತನಿಗೆ ಹತ್ತಿರವಾಗಲು ಹೃದಯದ ಭಾಷೆ ಮುಖ್ಯ: ಒಡಿಯೂರು ಶ್ರೀ

ಉಪ್ಪಿನಂಗಡಿ: ಭಜನೆಗೆ ದೇವರು ಬೇಗನೇ ಒಲಿಯುತ್ತಾರೆ. ದೇವರನ್ನು ಒಳಗಣ್ಣಿನಿಂದ ನೋಡುವ ಕೆಲಸವಾಗಬೇಕು. ಹೃದಯದ ಭಾಷೆಯಿಂದ ಮಾತ್ರ ಭಗವಂತನಿಗೆ ಹತ್ತಿರವಾಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.


ಇಲ್ಲಿನ 34 ನೆಕ್ಕಿಲಾಡಿಯಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ಗುರುರಾಘವೇಂದ್ರರ ಮಠದಲ್ಲಿ ನಡೆಯುತ್ತಿರುವ ಲಕ್ಷ್ಮಣ ಸಹಿತ ಸೀತಾರಾಮ ದೇವರು, ಮುಖ್ಯಪ್ರಾಣ ದೇವರು, ಮತ್ತು ಶ್ರೀ ಗುರುರಾಘವೇಂದ್ರ ಸಾರ್ವಭೌಮರ ಬೃಂದಾವನದ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಮಹೋತ್ಸವದಲ್ಲಿ ಎ.3ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು.


ಜ್ಞಾನ ಮತ್ತು ಮಾನ ಬಹಳ ಶ್ರೇಷ್ಠವಾಗಿದ್ದು, ಇದು ಸರಿಯಾಗಿದ್ದರೆ ಮಾತ್ರ ಬದುಕು ಶ್ರೇಷ್ಠ. ಶರೀರವನ್ನು ಸಾಧನೆಗೆ ಉಪಯೋಗಿಸಿದಾಗ ಮಾತ್ರ ಜೀವನ ಸಾರ್ಥಕತೆ ಪಡೆಯಲು ಸಾಧ್ಯ. ಜನರ ಭಕ್ತಿ ಇಲ್ಲಿ ಸುಂದರವಾಗಿ ರೂಪುಗೊಂಡಿರುವ ಮಂದಿರದಲ್ಲಿ ಕಾಣಿಸುತ್ತದೆ ಎಂದರು. ಧಾರ್ಮಿಕ ಉಪನ್ಯಾಸ ನೀಡಿದ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲರಾದ ಸತ್ಯನಾರಾಯಣ ಆಚಾರ್ಯ ಬೆಳಾಲು, ಮಾನವನಿಗೆ ದೈವೀ ಶಕ್ತಿಯೂ ಬೇಕು. ಗುರು ಶಕ್ತಿಯೂ ಬೇಕು. ದೈವೀ ಶಕ್ತಿಯು ಶರಣಾಗತಿಯನ್ನು ತೋರಿಸಿದರೆ, ಗುರು ಶಕ್ತಿಯು ನಮ್ಮೊಳಗೆ ಚಿಂತನಾ ಶಕ್ತಿಯನ್ನು ತೆರೆದಿಡುತ್ತದೆ. ಬದುಕಿನಲ್ಲಿ ಪ್ರೀತಿ, ಪ್ರೇಮ ಎಷ್ಟು ಮುಖ್ಯವೋ ಬುದ್ಧಿಯೂ ಅಷ್ಟೇ ಮುಖ್ಯವಾಗಿದೆ. ಸರ್ವ ಶಕ್ತನಾದ ಪರಮಾತ್ಮನು ನಮ್ಮೆಲ್ಲರ ಹೃದಯದಲ್ಲಿದ್ದಾನೆ. ಅದನ್ನು ಅರಿತುಕೊಂಡು ಬದುಕಿದಾಗ ಉತ್ತಮ ಜೀವನ ನಮ್ಮದಾಗಲು ಸಾಧ್ಯ ಎಂದರು.


ರಾಜಗೋಪುರ ಉದ್ಘಾಟಿಸಿ ಮಾತನಾಡಿದ ಮುಂಬೈನ ಶ್ರೀ ಪ್ಯಾಕ್ ಕಂಟೈನರ‍್ಸ್ ಪ್ರೈವೇಟ್ ಲಿ.ನ ಎಂ.ಡಿ. ಬಾಲಕೃಷ್ಣ ಎಂ ರೈ ತಿಪ್ಪೆಕೋಡಿ ಮಾತನಾಡಿ, ಸ್ವಾರ್ಥದ ಜೀವನ ನಮ್ಮದಾಗಬಾರದು. ಈ ಸಮಾಜದಲ್ಲಿ ಗಳಿಸಿದ್ದರ ಒಂದಂಶವನ್ನಾದರೂ ಸಮಾಜಕ್ಕೆ ಅರ್ಪಿಸಬೇಕು. ಆಗ ದೇವರ ಪ್ರೀತಿಗೆ ನಾವು ಪಾತ್ರರಾಗಲು ಸಾಧ್ಯ ಎಂದರು.


ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಗುರು ಅಂದರೆ ಜ್ಞಾನ ಮತ್ತು ಬೆಳಕು. ಜ್ಞಾನ ಮತ್ತು ಬೆಳಕಿಲ್ಲದ ಜೀವನ ವ್ಯರ್ಥ. ದೇವರನ್ನು ಪೂಜಿಸುವುದರೊಂದಿಗೆ ಗೋ ಸಂಪತ್ತನ್ನು ಉಳಿಸಲು ನಾವು ಪಣತೊಡಬೇಕು. ದೇವರ ಮುಂದೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದ ಸೇವೆ ನಮ್ಮದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಹಿಂದೂ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ಮಲ್ಲಿಕಾ ಪಕ್ಕಳ ಮಾತನಾಡಿ, ಮಂತ್ರಾಲಯದಂತೆ ನೆಕ್ಕಿಲಾಡಿ ಮಠವೂ ಬೆಳಗಲಿ. ನಂಬಿ ಬಂದವರಿಗೆ ರಾಯರ ಅನುಗ್ರಹ ಸದಾ ಇರಲಿ ಎಂದರು.


ವೇದಿಕೆಯಲ್ಲಿ ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಕೆ.ವಿ. ಪ್ರಸಾದ, ಉಪ್ಪಿನಂಗಡಿಯ ಶ್ರೀ ರಾಮ ಶಾಲೆಯ ಸಂಚಾಲಕ ಯು.ಜಿ.ರಾಧಾ, ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಅನುರಾಧ ಆರ್. ಶೆಟ್ಟಿ, ತುಮಕೂರಿನ ಹೊಟೇಲ್ ಉದ್ಯಮಿ ಗುರುಪ್ರಸಾದ್ ಬಳ್ಳಕ್ಕುರಾಯ, ಉದ್ಯಮಿ ಕರಾಯ ರಾಮಚಂದ್ರ ನಾಯಕ್, ಕಡವಿನಬಾಗಿಲಿನ ಶ್ರೀ ರಾಜನ್ ದೈವ ಉಬಾರ್ ಕಲ್ಕುಡ, ಕಲ್ಲುರ್ಟಿ ದೈವಸ್ಥಾನದ ಆಡಳಿತ ಮಂಡಳಿ ಸದಸ್ಯ ಚಿದಾನಂದ ನಾಯಕ್, ಯಕ್ಷಧ್ರುವ ಪಟ್ಲ ಪೌಂಢೇಶನ್ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಜಗದೀಶ್ ಶೆಟ್ಟಿ, ಹುಣಸೂರು ಶ್ರೀ ಕೃಷ್ಣ ಟ್ರೇಡರ‍್ಸ್‌ನ ಕೃಷ್ಣ ಟಿ., ಗಜಾನನ ಸ್ಟೋರ‍್ಸ್‌ನ ಮಾಲಕ ಕೆ. ಸುರೇಶ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ನ್ಯಾಯವಾದಿ ಮಹೇಶ್ ಕಜೆ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಡಾ. ರಮ್ಯ ರಾಜಾರಾಂ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಪ್ರಮುಖರಾದ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಡಾ. ರಾಜಾರಾಂ ಕೆ.ಬಿ., ರಾಮಚಂದ್ರ ಮಣಿಯಾಣಿ, ರವೀಶ್ ಎಚ್.ಟಿ., ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಕೈಲಾರು ರಾಜಗೋಪಾಲ ಭಟ್, ವಿಶ್ವನಾಥ ಶೆಟ್ಟಿ ಅಮ್ಟೂರು ಬಾರಿಕೆ, ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿಯ ಅಧ್ಯಕ್ಷ ಕೆ. ಹರೀಶ ಉಪಾಧ್ಯಾಯ, ಶ್ರೀ ರಾಘವೇಂದ್ರ ಮಠದ ಅಧ್ಯಕ್ಷ, ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿ ಕೋಶಾಧಿಕಾರಿ ಕೆ. ಉದಯ ಕುಮಾರ್, ಉಪಾಧ್ಯಕ್ಷರುಗಳಾದ ಕೆ. ಸದಾನಂದ, ಪ್ರಶಾಂತ್ ಎನ್. ಶಿವಾಜಿನಗರ, ಕಾರ್ಯದರ್ಶಿಗಳಾದ ಪ್ರಶಾಂತ್ ನೆಕ್ಕಿಲಾಡಿ, ಶ್ರೀನಿಧಿ ಉಪಾಧ್ಯಾಯ, ಶ್ರೀ ರಾಘವೇಂದ್ರ ಮಠದ ಪ್ರಧಾನ ಅರ್ಚಕ ಶ್ರೀ ರಾಘವೇಂದ್ರ ಭಟ್, ಪಧಾಧಿಕಾರಿಗಳಾದ ಶಿವಕುಮಾರ್ ಬಾರಿತ್ತಾಯ, ವಿನೀತ್ ಶಗ್ರಿತ್ತಾಯ, ಜಯಪ್ರಕಾಶ್ ಶ್ರೀನಿಧಿ, ವಿದ್ಯಾಧರ ಜೈನ್, ಸ್ವರ್ಣೇಶ್ ಗಾಣಿಗ, ಬಿಪಿನ್, ಕೀರ್ತನ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕೆ. ರಾಧಾಕೃಷ್ಣ ನಾಯಕ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎನ್. ಗೋಪಾಲ ಹೆಗ್ಡೆ ವಂದಿಸಿದರು. ಡಾ. ಗೋವಿಂದ ಪ್ರಸಾದ್ ಕಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here