ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಚಿಣ್ಣರ ಚಾವಡಿ -2024’ ಸಮಾರೋಪ

0

ವಿದ್ಯಾರ್ಥಿಗಳಿಗೆ ಶಿಕ್ಷಕರು ತೋರುವ ಗೌರವ, ಪ್ರೀತಿ ಸಮಾಜದಲ್ಲಿ ಬದಲಾವಣೆಗೆ ಪೂರಕ: ಲಲಿತಾ ಟೀಚರ್

ಯಾವುದೇ ಕಾರ್ಯಕ್ರಮ ಯಶಸ್ಸಾಗಲು ಪೋಷಕರ ಪ್ರೋತ್ಸಾಹ ಅಗತ್ಯ: ಎಲ್. ಎನ್ ಕೂಡೂರು

ಪುಟಾಣಿಗಳ ಲವಲವಿಕೆಯ ಉತ್ಸಾಹ, ಸಂತೋಷ ಮನೆ ಮನೆಗಳಲ್ಲಿ ವಿಜೃಂಭಿಸಲಿ: ಜಯರಾಮ ರೈ

ವಿಟ್ಲ: ವಿದ್ಯಾರ್ಥಿಗಳಿಗೆ ಶಿಕ್ಷಕರು ತೋರುವ ಗೌರವ ಪ್ರೀತಿ ಸಮಾಜದಲ್ಲಿ ಬದಲಾವಣೆಗೆ ಪೂರಕವಾಗುತ್ತದೆ, ಅದೇ ಗುರು ಸಮೂಹಕ್ಕೆ ಸಲ್ಲುವ ಗೌರವವಾಗುತ್ತದೆ ಎಂದು ಹಿರಿಯ ಶಿಕ್ಷಕಿ ಲಲಿತಾ ರವರು ಹೇಳಿದರು.
ಅವರು ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪುಟಾಣಿಗಳಿಗಾಗಿ ಆಯೋಜಿಸಿದ್ದ “ಚಿಣ್ಣರ ಚಾವಡಿ -2024” ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್. ಎನ್ ಕೂಡೂರುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಕಾರ್ಯಕ್ರಮದ ಯೋಜನೆಗೆ ಹೆತ್ತವರ ಉತ್ತಮ ಪ್ರತಿಕ್ರಿಯೆಗಳು ಬಂದಾಗ ಅದು ಯಶಸ್ವಿಯಾಗುತ್ತದೆ ಎಂದರು.


ಶಾಲಾ ಪ್ರಾಂಶುಪಾಲರಾದ ಜಯರಾಮ ರೈ ಮಾತನಾಡಿ ಪುಟಾಣಿಗಳ ಲವಲವಿಕೆಯ ಉತ್ಸಾಹ, ಸಂತೋಷ ಮನೆ ಮನೆಗಳಲ್ಲಿ ವಿಜೃಂಭಿಸಲಿ ಎಂದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಕಾರ್ಯದರ್ಶಿ ಪ್ರಕಾಶ್ ಕುಕ್ಕಿಲ, ಆಡಳಿತಾಧಿಕಾರಿ ರಾಧಾಕೃಷ್ಣ ಎ, ಉಪಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು. ಪೋಷಕರಾದ ನಯನಾ ಕೂಡೂರು ಹಾಗೂ ಮೇಘನಾ, ವಿದ್ಯಾರ್ಥಿಗಳಾದ ಕುಶಿಕ್ ಹಾಗೂ ಲಕ್ಷ ರಾಮ್ ಶೆಟ್ಟಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲು ಶಿಬಿರದ ನೆನಪಿಗಾಗಿ ಸಂಚಿಕೆಯೊಂದನ್ನು ಬಿಡುಗಡೆಗೊಳಿಸಲಾಯಿತು. ಶಿಬಿರದ ಪುಟಾಣಿಗಳಿಗೆ ಹಾಗೂ ಹೆತ್ತವರಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸಹ ಶಿಕ್ಷಕಿ ವಿದ್ಯಾಶ್ರೀ ಸ್ವಾಗತಿಸಿದರು. ಸಹ ಶಿಕ್ಷಕಿ ಭಾವನ ವಂದಿಸಿದರು. ದೈಹಿಕ ಶಿಕ್ಷಕರಾದ ಶಶಿಕಲಾ ಹಾಗೂ ಭಾನುಪ್ರಕಾಶ್ ಸ್ಪರ್ಧೆಗಳನ್ನು ಸಂಯೋಜಿಸಿದರು. ಸಹ ಶಿಕ್ಷಕಿ ದೇವಿಕಾ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here