ಸಮಸ್ತ ಪಬ್ಲಿಕ್ ಪರೀಕ್ಷೆ: ವೀರಮಂಗಲ ಮದ್ರಸಕ್ಕೆ ಶೇ.100 ಫಲಿತಾಂಶ-ಖದೀಜತ್ ರಿಝಾ ಟಾಪ್ ಪ್ಲಸ್

0

ಪುತ್ತೂರು: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 2023-24ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ವೀರಮಂಗಲ ಕಮರುಲ್ ಇಸ್ಲಾಂ ಮದ್ರಸ 100% ಫಲಿತಾಂಶ ಪಡೆದುಕೊಂಡಿದೆ.

೫ನೇ ತರಗತಿಯ ವಿದ್ಯಾರ್ಥಿನಿ ಖದೀಜತ್ ರಿಝಾ 488 ಅಂಕ ಪಡೆದು ಟಾಪ್ ಪ್ಲಸ್ ಆಗಿ ಉತ್ತೀರ್ಣರಾಗಿದ್ದಾರೆ. 7ನೇ ತರಗತಿ ವಿದ್ಯಾರ್ಥಿನಿಗಳಾದ ಅಸ್ಲಾ ಫಾತಿಮಾ, ರಾಫಿಯ, ಮತ್ತು 5ನೇ ತರಗತಿಯ ಶೈಬಾ, ಸಫೀಕುಲ್ ಹಸನ್, ಸಕೀಬುಲ್ ಹುಸೈನ್ ಮೊದಲಾದ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನೊಂದಿಗೆ ತೇರ್ಗಡೆಗೊಂಡಿದ್ದಾರೆ. ಮುಹಮ್ಮದ್ ಸಿನಾನ್ ರೈಫಾ, ಅಫ್ಝಲ್ ಪ್ರಥಮ ಶ್ರೇಣಿಯಲ್ಲಿ, 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ ಒಬ್ಬ ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here