ಪುತ್ತೂರು: ಏ.26ರಂದು ನಡೆಯಲಿರುವ ದ.ಕ.ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಒಟ್ಟು 11 ಅಭ್ಯರ್ಥಿಗಳಿಂದ 21 ನಾಮಪತ್ರ ಸಲ್ಲಿಕೆಯಾಗಿದೆ.ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಏ.4ರಂದು ಮೂರು ನಾಮಪತ್ರ ಸಲ್ಲಿಕೆಯಾಗಿದೆ.
ಬಿಜೆಪಿ ಅಭ್ಯರ್ಥಿಯಾಗಿ ಮಂಗಳೂರು ಕಾರ್‌ಸ್ಟ್ರೀಟ್ ಮಹಾಮಾಯ ದೇವಳ ರಸ್ತೆ ನಿವಾಸಿ ಸೇಸಣ್ಣ ಚೌಟರ ಮಗ ಕ್ಯಾ|ಬ್ರಿಜೇಶ್ ಚೌಟ(42ವ.), ಕಾಂಗ್ರೆಸ್ ಅಭ್ಯರ್ಥಿಯಾಗಿ ಕಂಕನಾಡಿ ಮಹಾಲಿಂಗೇಶ್ವರ ಟೆಂಪಲ್‌ರಸ್ತೆ ಕಪಿತಾನಿಯೋ ಶಾಲಾ ಬಳಿಯ ಹೆಚ್.ಎಂ.ರಾಮಯ್ಯ ಅವರ ಮಗ ಆರ್.ಪದ್ಮರಾಜ್(53ವ.),ಜನತಾ ಪಕ್ಷದಿಂದ ಮಂಗಳೂರು ಕಾವೂರ್ ರವೀಂದ್ರನಾಥ ಪೂಜಾರಿಯವರ ಮಗ ಸುಪ್ರೀತ್ ಕುಮಾರ್ ಪೂಜಾರಿ(47ವ.),ಜನತಾ ದಳ(ಯು)ದಿಂದಲೂ ಸುಪ್ರೀತ್ ಕುಮಾರ್ ಪೂಜಾರಿ, ಬಹುಜನ್ ಸಮಾಜ್ ಪಾರ್ಟಿ(ಬಿಎಸ್ಪಿ)ಯಿಂದ ಮಂಗಳೂರು ಪಡುಬೆಟ್ಟು ಕೊಟ್ಟಾರ ಅಶೋಕ್‌ನಗರ ಶಂಬು ಅವರ ಮಗ ಕಾಂತಪ್ಪ(63ವ.), ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಬಂಟ್ವಾಳ ಅಳಿಕೆ ಮಡಿಯಾಳ ಕೆ.ಎಸ್.ಈಶ್ವರಯ್ಯ ಅವರ ಮಗ ಕೆ.ಇ.ಮನೋಹರ(47ವ.), ಕರ್ನಾಟಕ ರಾಷ್ಟ್ರ ಸಮಿತಿಯಿಂದ ಸುಳ್ಯ ನೆಲ್ಲೂರು ಕೆಮ್ರಾಜೆ ಮೊಟ್ಟೆಹೌಸ್ ದಿ.ಶಿವಪ್ಪ ಗೌಡ ಎಂ.ರವರ ಮಗಳು ರಂಜಿನಿ ಎಂ(39ವ.).ಮತ್ತು ಕರುನಾಡ ಸೇವಕರ ಪಾರ್ಟಿಯಿಂದ ಮಂಗಳೂರು ಕೆಂಜಾರು ಕುಪ್ಪ ಸ್ವಾಮಿಯವರ ಮಗ ದುರ್ಗಾಪ್ರಸಾದ್(33ವ.) ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಕಂಕನಾಡಿ ಪೊಲೀಸ್ ಠಾಣೆ ರಸ್ತೆ ನಿವಾಸಿ ದಿ.ಜೋಸೆಫ್ ಮಾಡ್ತಾರವರ ಮಗ ಫ್ರಾನ್ಸಿಸ್ ಲ್ಯಾನ್ಸಿ ಮಾಡ್ತಾ(60ವ.),ಸುಳ್ಯ ಅಜ್ಜಾವರ ಬೂಡುಮಕ್ಕಿ ಗಂಗಾಧರ ಅವರ ಮಗ ಸತೀಶ್ ಬಿ(28ವ.), ಬಜ್ಪೆ ಮುರನಗರ ಕೋಳಂಬೆ ಪರಂಗಿಪಳ್ಳ ವೈಟ್‌ಹೌಸ್‌ನ ದಿ.ವಿಕ್ಟರ್ ಪಿಂಟೋ ಅವರ ಮಗ ಮ್ಯಾಕ್ಸಿಂ ಪಿಂಟೋ(59ವ.), ಉಳ್ಳಾಲ ಪೆರ್ಮನ್ನೂರು ಹೊಸಗದ್ದೆ ಗೇಬ್ರಿಯಲ್ ಕುವೆಲ್ಲೋ ಅವರ ಮಗ ದೀಪಕ್ ರಾಜೇಶ್ ಕುವೆಲ್ಲೋ(48ವ) ಅವರು ನಾಮಪತ್ರ ಸಲ್ಲಿಸಿದ್ದಾರೆ.ಈ ಪೈಕಿ ಕ್ಯಾ|ಬ್ರಿಜೇಶ್ ಚೌಟ ಮತ್ತು ಆರ್.ಪದ್ಮರಾಜ್ ಅವರು ತಲಾ ನಾಲ್ಕು ಸೆಟ್, ರಾಜೇಶ್ ಕುವೆಲ್ಲೋ ಅವರು ಮೂರು ಸೆಟ್ ಮತ್ತು ರಂಜಿನಿ ಎಂ.ಅವರು ಎರಡು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ಸುಪ್ರೀತ್ ಕುಮಾರ್ ಪೂಜಾರಿಯವರು ಜನತಾ ಪಕ್ಷ ಮತ್ತು ಜನತಾ ದಳ(ಯು)ದಿಂದ ಪ್ರತ್ಯೇಕ ನಾಮಪತ್ರ ಸಲ್ಲಿಸಿದ್ದಾರೆ.