ಕಬಕ:ಸ್ವಿಫ್ಟ್ ಕಾರಿನಲ್ಲಿ ಅಕ್ರಮ ಜಾನುವಾರು ಸಾಗಾಟ-ಓರ್ವ ಆರೋಪಿ ಬಂಧನ-ಮಧ್ಯಂತರ ಜಾಮೀನು

0

ಪುತ್ತೂರು:ಕಬಕ ಗ್ರಾಮದ ಪದ್ನಡ್ಕ ಎಂಬಲ್ಲಿ ಪತ್ತೆಯಾಗಿದ್ದ, ಸ್ವಿಫ್ಟ್ ಕಾರಲ್ಲಿ ಹಿಂಸಾತ್ಮಕವಾಗಿ 4 ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಮಾಂಸಕ್ಕಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಗೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಮಾ.24ರಂದು ರಾತ್ರಿ ಸುಮಾರು 9.15ಕ್ಕೆ ಪುತ್ತೂರು ನಗರ ಠಾಣೆಯ ಎಸ್.ಐ.ನಂದ ಕುಮಾರ್ ಎಂ.ಎಂ.ಅವರು ಸಿಬ್ಬಂದಿಗಳೊಂದಿಗೆ ಗಸ್ತು ನಿರತರಾಗಿದ್ದ ವೇಳೆ, ಕಬಕ ಪದ್ನಡ್ಕದಲ್ಲಿ ಮಾರುತಿ ಸ್ವಿಫ್ಟ್ ಕಾರೊಂದು(ಕೆ.ಎ.19:ಇಎಚ್-8518)ಚರಂಡಿಗೆ ಬಿದ್ದಿತ್ತು.ಅದರಲ್ಲಿ 4 ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿರುವುದು ಕಂಡು ಬಂದಿರುವುದಾಗಿ ದೊರೆತ ಮಾಹಿತಿಯಾಧರಿಸಿ ಘಟನಾ ಸ್ಥಳಕ್ಕೆ ತೆರಳಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿತ್ತು.ಯಾರೋ ದುಷ್ಕರ್ಮಿಗಳು  ಜಾನುವಾರುಗಳನ್ನು ಎಲ್ಲಿಯೋ ಕಳ್ಳತನ ಮಾಡಿ ಹಿಂಸಾತ್ಮಕ ರೀತಿಯಲ್ಲಿ ಕಾರಿನಲ್ಲಿ ತುಂಬಿಸಿ ಮಾಂಸಕ್ಕಾಗಿ ಸಾಗಾಟ ಮಾಡುತ್ತಿದ್ದ ಸಮಯ ಕಾರು ಚರಂಡಿಗೆ ಬಿದ್ದ ವೇಳ ಆರೋಪಿಗಳು ಅಲ್ಲಿಂದ ಓಡಿ ಹೋಗಿರುವ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯಾಗಿರುವ, ಕಲ್ಲಂದಡ್ಕ ಅಬ್ದುಲ್ ಬ್ಯಾರಿಯವರ ಮಗ ಹಸೈನಾರ್ ಕೆ.ಎಂಬಾತನನ್ನು ಪೊಲೀಸರು  ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ನ್ಯಾಯಾಲಯ ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಏ.5ರಂದು ಆದೇಶಿಸಿದೆ.ಆರೋಪಿ ಪರ ವಕೀಲರಾದ ಅಬ್ದುಲ್ ರಹಿಮಾನ್ ಹಿರೇಬಂಡಾಡಿ, ಅಬ್ದುಲ್ ಮಜೀದ್ ಖಾನ್ ವಾದಿಸಿದ್ದರು.

LEAVE A REPLY

Please enter your comment!
Please enter your name here