ಕಾಣಿಯೂರು: ಬಿಜೆಪಿ ಸ್ಥಾಪನಾ ದಿನಾಚರಣೆ

0

ಕಾಣಿಯೂರು: ಸುಳ್ಯ ಬಿಜೆಪಿ ಮಂಡಲ ವ್ಯಾಪ್ತಿಯ ಸವಣೂರು ಮಹಾಶಕ್ತಿ ಕೇಂದ್ರದ ಕಾಣಿಯೂರು ಬೂತ್ 82 ರಲ್ಲಿ ಬಿಜೆಪಿ ಸ್ಥಾಪನಾ ದಿನಾಚರಣೆಯನ್ನು ಪಕ್ಷದ ಧ್ವಜ ಹಾರಿಸಿ ಬೂತ್ ಅಧ್ಯಕ್ಷ ಸುಂದರ ಬೆದ್ರಾಜೆಯವರ ಮನೆಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾದ ಕಾರ್ಯದರ್ಶಿ ಧರ್ಮೇಂದ್ರ ಗೌಡ ಕಟ್ಟತ್ತಾರು,ಕಾಣಿಯೂರು ಗ್ರಾ.ಪಂ.ಸದಸ್ಯ ರಾಮಣ್ಣ ಗೌಡ ಮುಗರಂಜ, ಚಾರ್ವಾಕ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಪರಮೇಶ್ವರ ಅನಿಲ,ಮಾಜಿ ನಿರ್ದೇಶಕ ಪುಟ್ಟಣ್ಣ ಗೌಡ ಮುಗರಂಜ, ಕಾಣಿಯೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ,ಬೂತ್ ಪ್ರಮುಖರಾದ ಲಕ್ಷ್ಮಣ ಗೌಡ ಮುಗರಂಜ, ದಿವಾಕರ ಬೆದ್ರಾಜೆ,ಬಾಲಕೃಷ್ಣ ಬಸ್ತಿ ಬೆದ್ರಾಜೆ,ಬೂತ್ ಕಾರ್ಯದರ್ಶಿ ಸುರೇಶ್ ಬಂಡಾಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here