ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಡುವುದೇ ಅಕ್ಷಯ ಕಾಲೇಜಿನ ಧ್ಯೇಯ-ಜಯಂತ್ ನಡುಬೈಲು
ಪುತ್ತೂರು:ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಹಾಗೂ ಆಧುನೀಕರಣದ ಪ್ರಭಾವದಿಂದ ವಿಶ್ವದಾದ್ಯಂತ ಸಮರ್ಪಕವಾಗಿ ಎದುರಿಸಲು ವೃತ್ತಿಪರ ಶಿಕ್ಷಣ ಅಗತ್ಯವಾಗಿದೆ. ಅದರ ಕೊರತೆ ಗ್ರಾಮೀಣ ಪ್ರದೇಶದಲ್ಲಿ ಇರುವುದನ್ನು ಮನಗಂಡು, ಈ ಕೊರತೆಯನ್ನು ನೀಗಿಸುವುದರಲ್ಲಿ ಅಕ್ಷಯ ಕಾಲೇಜು ಪುಟ್ಟ ಹೆಜ್ಜೆಯನ್ನಿಟ್ಟಿದೆ. ವಿದ್ಯಾರ್ಥಿಗಳಲ್ಲಿ ಸಾಧಿಸಬೇಕೆನ್ನುವ ಆತ್ಮವಿಶ್ವಾಸ ಹಾಗೂ ಛಲವಿರಬೇಕು. ಸ್ವಾವಲಂಭಿಯಾಗಿ ಬದುಕಬಲ್ಲೆ ಎನ್ನುವ ಆಶಯದೊಂದಿಗೆ ವಿದ್ಯಾರ್ಥಿಗಳಿಗೆ ಸುಂದರ ಬದುಕು ಕಟ್ಟಿಕೊಡುವುದೇ ಅಕ್ಷಯ ಕಾಲೇಜಿನ ಧ್ಯೇಯವಾಗಿದೆ ಎಂದು ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲುರವರು ಹೇಳಿದರು.
ಪಿಯುಸಿ ಪರೀಕ್ಷೆ ಬರೆದು ಮುಂದಿನ ಶಿಕ್ಷಣದ ಬಗ್ಗೆ ಚಿಂತೆಯೇ?, ಅತ್ತ್ಯುತ್ತಮ ಕೋರ್ಸ್‌ನ ಆಯ್ಕೆಯಲ್ಲಿ ಗೊಂದಲವೇ?, ಈ ನಿಟ್ಟಿನಲ್ಲಿ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೊಂದು ಸುವರ್ಣಾವಕಾಶ ಒದಗಿಸುತ್ತಿದೆ. ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನಡಿಯಲ್ಲಿ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜು ಹಾಗೂ ಕಾಲೇಜಿನ ಐ.ಕ್ಯೂ.ಎ.ಸಿ ಸಹಭಾಗಿತ್ವದಲ್ಲಿ ಏ.6 ರಂದು ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ‘ವೃತ್ತಿಪರ ಕೋರ್ಸ್’ಗಳ ಬಗ್ಗೆ ಮಾಹಿತಿ, ಮುಂದಿನ ವಿದ್ಯಾಭ್ಯಾಸಕ್ಕೆ ಬ್ಯಾಂಕಿನಿಂದ ದೊರೆಯುವ ‘ಶೈಕ್ಷಣಿಕ ಸಾಲ ಸೌಲಭ್ಯ’ಗಳ ಹಾಗೂ ಸರ್ಕಾರ ಮತ್ತು ಖಾಸಗಿ ಕಂಪೆನಿಗಳಿಂದ ದೊರೆಯುವ ‘ವಿದ್ಯಾರ್ಥಿ ವೇತನ’ದ ಬಗ್ಗೆ ‘ವೃತ್ತಿ ಜೀವನದ ಯಶಸ್ಸಿನಲ್ಲಿ ವಿದ್ಯಾರ್ಥಿಗಳ ಜೊತೆಗೆ’ ಎಂಬ ಧ್ಯೇಯವಾಕ್ಯದಡಿ ಮಾಹಿತಿ ಕಾರ್ಯಾಗಾರ ‘ದಿಕ್ಸೂಚಿ-2024’ ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀಮಂತರು ದೊಡ್ಡ ದೊಡ್ಡ ನಗರಕ್ಕೆ ಹೋಗಿ ತಮಗೆ ಬೇಕಾದ ಕೋರ್ಸ್‌ಗಳನ್ನು ಆಯ್ದುಕೊಳ್ಳಲು ಶಕ್ತರಾಗುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ಮಕ್ಕಳ ಹೆತ್ತವರಿಗೆ ತಮ್ಮ ಮಕ್ಕಳನ್ನು ಮುಂದಕ್ಕೆ ಓದಿಸುವುದೇ ಕಷ್ಟಸಾಧ್ಯವೆನಿಸುತ್ತದೆ. ಈ ನಿಟ್ಟಿನಲ್ಲಿ ಪದವಿ ಶಿಕ್ಷಣದೊಂದಿಗೆ ವೃತ್ತಿಪರ ಶಿಕ್ಷಣವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಬದುಕು ಸುಂದರವಾಗಿಸಿಕೊಳ್ಳುವಲ್ಲಿ ಓಳ್ಳೆಯ ಕೋರ್ಸುಗಳನ್ನು ತೆರೆದಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಉದ್ಯೋಗದ ಭರವಸೆಯೊಂದಿಗೆ ಜೀವನ ಸುಗಮವಾಗಲಿ ಎಂದು ಹೇಳಿ ಶುಭ ಹಾರೈಸಿದರು.
ವೃತ್ತಿಯಾಧಾರಿತ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡರೆ ಭವಿಷ್ಯಕ್ಕೆ ಒಳ್ಳೆಯದು-ಸಂಪತ್ ಪಿ.ಪಕ್ಕಳ:
ಕಾಲೇಜಿನ ಪ್ರಾಂಶುಪಾಲ ಸಂಪತ್ ಪಿ.ಪಕ್ಕಳರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಕ್ಷಯ ಕಾಲೇಜು ವಿದ್ಯಾರ್ಥಿಗಳ ಭವಿಷ್ಯದ ದೃಷಿಕೋನದಿಂದ ಸಕರಾತ್ಮಕವಾಗಿ ಹೆಜ್ಜೆ ಇಟ್ಟಿದೆ. ಮಂಗಳೂರು ವಿಶ್ವವಿದ್ಯಾನಿಲಯದ 2022-23ನೇ ಸಾಲಿನ ಫ್ಯಾಶನ್ ಡಿಸೈನಿಂಗ್‌ನಲ್ಲಿ ಕಾಲೇಜು ಪ್ರಥಮ ಹಾಗೂ ದ್ವಿತೀಯ ರ‍್ಯಾಂಕ್‌ಗಳು ಅಕ್ಷಯ ಕಾಲೇಜಿಗೆ ಸಿಕ್ಕಿರುವುದು ಹೆಮ್ಮೆ ಎನಿಸಿದೆ. ವಿದ್ಯಾರ್ಥಿಗಳು ಕೋರ್ಸ್ ಆಯ್ಕೆ ಮಾಡುವಾಗ ಇನ್ನೊಬ್ಬರಿಂದ ಪ್ರೇರಿತಗೊಳ್ಳಬಾರದು, ವಿದ್ಯಾರ್ಥಿ ತನ್ನ ಸಾಮರ್ಥ್ಯವನ್ನು ಅರಿತುಕೊಂಡು ಕೋರ್ಸ್ ಆಯ್ಕೆ ಮಾಡಿಕೊಂಡರೆ ಮಾತ್ರ ನಿಮ್ಮ ಇಚ್ಛೆಯ ಕ್ಷೇತ್ರಕ್ಕೆ ಕಾಲಿಡಬಹುದು ಮತ್ತು ಸಾಧನೆ ಮಾಡಬಹುದು. ಸಾಮಾನ್ಯ ಕೋರ್ಸ್‌ಗಿಂತ ವೃತ್ತಿಯಾಧಾರಿತ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡರೆ ವೃತ್ತಿ ಕ್ಷೇತ್ರದಲ್ಲಿ ವಿವಿಧ ಅವಕಾಶಗಳನ್ನು ಗಳಿಸಬಹುದು ಎಂದು ಹೇಳಿ ಕಾಲೇಜಿನಲ್ಲಿನ ವೃತ್ತಿಪರ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಿದರು.
ವಿದ್ಯಾರ್ಥಿನಿ ಪ್ರಕೃತಿ ಮತ್ತು ತಂಡ ಪ್ರಾರ್ಥಿಸಿದರು. ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಟಿ.ಎ ವಂದಿಸಿ, ಕನ್ನಡ ವಿಭಾಗದ ಉಪನ್ಯಾಸಕ ಹರೀಶ್ಚಂದ್ರರವರು ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವೃಂದ ಹಾಗೂ ಉಪನ್ಯಾಸಕರೇತರ ವೃಂದ ಸಹಕರಿಸಿದರು. ಕಾರ್ಯಕ್ರಮದಲ್ಲಿ ನೂರೈವತ್ತಕ್ಕೂ ಮಿಕ್ಕಿ ವಿವಿಧ ಕಡೆಗಳಿಂದ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಭವಿಷ್ಯದ ಉಪನ್ಯಾಸ..
ಸಂಪನ್ಮೂಲ ವ್ಯಕ್ತಿಗಳಾಗಿ ಪದವಿ ವಿದ್ಯಾಭ್ಯಾಸಕ್ಕೆ ದೊರಕುವ ಶೈಕ್ಷಣಿಕ ಸಾಲ ಸೌಲಭ್ಯಗಳ ಕುರಿತು ಪುತ್ತೂರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಶಾಖೆಯ ಹಿರಿಯ ವ್ಯವಸ್ಥಾಪಕ ಸುರೇಶ್ ನಾಯ್ಕ ಬಿ, ಪಿಯುಸಿ ನಂತರದ ವೃತ್ತಿಪರ ಕೋರ್ಸುಗಳ ಬಗ್ಗೆ ಕಿಶನ್ ಎನ್.ರಾವ್, ಶ್ರೀಮತಿ ರಶ್ಮಿ ಕೆ, ಕು.ಭವ್ಯಶ್ರಿರವರು, ಪದವಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿದ್ಯಾರ್ಥಿ ವೇತನಗಳ ಬಗ್ಗೆ ಬೆಳ್ತಂಗಡಿಯ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಶ್ರೀಮತಿ ಉಷಾ ನಾಯಕ್‌ರವರು ಉಪನ್ಯಾಸ ನೀಡಿದರು.
ವೃತ್ತಿಯಾಧಾರಿತ ಕೋರ್ಸ್‌ಗಳು..
-ಬಿಎಸ್ಸಿ ಫ್ಯಾಶನ್ ಡಿಸೈನ್
-ಬಿಎಸ್ಸಿ ಇಂಟೀರಿಯರ್ ಡಿಸೈನ್ & ಡೆಕೋರೇಶನ್
-ಬಿ.ಕಾಂ ವಿಥ್ ಏವಿಯೇಶನ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್
-ಬಿ.ಎಚ್.ಎಸ್(ಹೊಟೇಲ್ ಮ್ಯಾನೇಜ್‌ಮೆಂಟ್)
-ಬಿಸಿಎ ವಿಥ್ ಆರ್ಟಿಫಿಷಲ್ ಇಂಟಲಿಜೆನ್ಸಿ & ಸೈಬರ್ ಸೆಕ್ಯೂರಿಟಿ ಕೋರ್ಸ್
ಪ್ರಸಕ್ತ ವರ್ಷದಿಂದ
-ಬಿ.ಬಿ.ಎ ವಿಥ್ ಲಾಜಿಸ್ಟಿಕ್ಸ್ & ಸಪ್ಲೈ ಚೈನ್
-ಬಿಕಾಂ ವಿಥ್ ಸಿಎ ಇಂಟಿಗ್ರೇಟೆಡ್
-ಬಿಎ ಪದವಿಯೊಂದಿಗೆ ವಿವಿಧ ವೃತ್ತಿಪರ ಸರ್ಟಿಫಿಕೇಟ್ ಕೋರ್ಸ್‌ಗಳು
ದಾಖಲಾತಿ ಆರಂಭಗೊಂಡಿದೆ..
ವಿದ್ಯಾರ್ಥಿಗಳ ಸುಂದರ ಭವಿಷ್ಯಕ್ಕೆ ಅಕ್ಷಯ ಕಾಲೇಜು ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಿದ್ದು, ವಿದ್ಯಾರ್ಥಿಗಳ ದಾಖಲಾತಿಗೆ ಮೊಬೈಲ್ ನಂ 9141160704, 808381678, 8050108510 ಸಂಪರ್ಕಿಸಬಹುದು ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.