ದರ್ಬೆ: ರಿಕ್ಷಾ-ಆಕ್ಟೀವಾ ಡಿಕ್ಕಿ, ಓರ್ವನಿಗೆ ಗಾಯ

0

ಪುತ್ತೂರು: ದರ್ಬೆ ಫಿಲೋಮಿನಾ ಕಾಲೇಜು ಬಳಿ ರಿಕ್ಷಾ ಹಾಗೂ ಆಕ್ಟೀವಾ ನಡುವೆ ಡಿಕ್ಕಿ ಸಂಭವಿಸಿ, ಓರ್ವನಿಗೆ ಗಾಯಗಳಾದ ಘಟನೆ ಏ.8 ರಂದು ಬೆಳಿಗ್ಗೆ ನಡೆದಿದೆ.

ಕೆಎ21ವೈ9891 ನಂಬರಿನ ಆಕ್ಟೀವಾವು ಪರ್ಲಡ್ಕಕ್ಕೆ ಹೋಗುವಲ್ಲಿ ತಿರುಗಿಸಿದಾಗ ಸಂಪ್ಯದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಆಟೋ ರಿಕ್ಷಾ(ಕೆಎ21ಸಿ6728)ಕ್ಕೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದೆ ಎನ್ನಲಾಗಿದೆ. ಅಪಘಾತದಲ್ಲಿ ರಿಕ್ಷಾದಲ್ಲಿದ್ದ ಓರ್ವ ಪ್ರಯಾಣಿಕ ವೃದ್ಧರೊಬ್ಬರಿಗೆ ಗಾಯಗಳಾಗಿದ್ದು ಗಾಯಾಳುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here