ಖಾಸಗಿ ಬಸ್-ಸ್ಕೂಟರ್ ಅಪಘಾತ ಪ್ರಕರಣ – ಆರೋಪಿ ಸ್ಕೂಟರ್ ಸವಾರ ದೋಷಮುಕ್ತ

0

ಪುತ್ತೂರು: ಸುಮಾರು ಆರು ವರ್ಷಗಳ ಹಿಂದೆ ಸ್ಕೂಟರ್ ಮತ್ತು ಖಾಸಗಿ ಬಸ್ಸೊಂದರ ಮಧ್ಯೆ ಸಂಭವಿಸಿದ್ದ ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿದ್ದ ಸ್ಕೂಟರ್ ಸವಾರನನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.

ಗಣೇಶ್ ರೈ ಎಂಬವರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟರ್ ಮತ್ತು ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಜಬೀಉಲ್ಲಾ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಖಾಸಗಿ ಬಸ್ಸಿನ ಮಧ್ಯೆ 34ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಪೆಟ್ರೋಲ್ ಪಂಪ್ ಬಳಿ ಅಪಘಾತ ಸಂಭವಿಸಿತ್ತು. ಪರಿಣಾಮ, ಸ್ಕೂಟರ್ ಹೆದ್ದಾರಿಯ ಮಧ್ಯದ ಗುಂಡಿಗೆ ಬಿದ್ದು ಹತೋಟಿ ತಪ್ಪಿ ಸ್ಕಿಡ್ ಆಗಿ ಸವಾರನ ಸಹಿತ ರಸ್ತೆಗೆ ಬಿದ್ದಿತ್ತು. ಸ್ಕೂಟರ್ ಸವಾರ ಗಣೇಶ್ ರೈಯವರು ರಸ್ತೆಗೆ ಎಸೆಯಲ್ಪಟ್ಟು, ಸ್ಕೂಟರ್ ಬಸ್ಸಿನ ಮುಂಭಾಗಕ್ಕೆ ತಾಗಿ ವಾಹನಗಳು ಜಖಂಗೊಂಡಿತ್ತು. ಅಪಘಾತದಿಂದ ಸ್ವತಹ ಗಣೇಶ್ ರೈ ಅವರು ತೀವ್ರ ಸ್ವರೂಪದ ಗಾಯಗೊಂಡಿದ್ದರು. ಅವರ ನಿರ್ಲಕ್ಷ್ಯತನದಿಂದಲೇ ಅಪಘಾತ ಸಂಭವಿಸಿದೆ ಎಂದು ಆರೋಪಿಸಿ ಬಸ್ ಚಾಲಕ ನೀಡಿದ ದೂರಿನ ಮೇರೆಗೆ ಸವಾರ ಗಣೇಶ್ ರೈ ಕಲಂ 279 ಐಪಿಸಿ ಅನ್ವಯ ತಪ್ಪು ಎಸಗಿದ್ದಾರೆ ಎಂದು ಆರೋಪಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.ಈ ಪ್ರಕರಣದಲ್ಲಿ ಆರಂಭದಲ್ಲಿ ಗಣೇಶ್ ರೈ ಅವರ ದೂರನ್ನು ಸ್ವೀಕರಿಸಿ ಪೊಲೀಸರು ಬಸ್ ಚಾಲಕನ ವಿರುದ್ಧ ಪ್ರಥಮ ವರ್ತಮಾನ ವರದಿ ದಾಖಲು ಮಾಡಿಕೊಂಡಿದ್ದರು.ನಂತರದ ಬೆಳವಣಿಗೆಯಲ್ಲಿ ಬಸ್ ಚಾಲಕನ ದೂರನ್ನು ಸ್ವಲ್ಪ ವಿಳಂಬವಾಗಿ ಸ್ವೀಕರಿಸಿ, ಆ ಆಧಾರದಲ್ಲಿ ಸ್ಕೂಟರ್ ಸವಾರ ಗಣೇಶ್ ರೈ ಅವರು ಆರೋಪಿ ಎಂದು ಅಂತಿಮ ವರದಿ ಸಲ್ಲಿಸಲಾಗಿತ್ತು.ಸದ್ರಿ ಪ್ರಕರಣದಲ್ಲಿ ಅಭಿಯೋಜನ ಪರ ಸುಮಾರು 10 ಸಾಕ್ಷಿಗಳ ಪೈಕಿ 8 ಸಾಕ್ಷಿಗಳನ್ನು ತನಿಖೆ ನಡೆಸಿ, ಸುಮಾರು 22 ದಾಖಲೆಗಳನ್ನು ಆಭಿಯೋಜನ ಪರ ಗುರುತಿಸಲಾಗಿತ್ತು. ಸರಕಾರಿ ಅಭಿಯೋಜಕರು ಮತ್ತು ಆರೋಪಿಯ ಪರ ವಕೀಲರಾದ ಮಹೇಶ್ ಕಜೆ ಇವರ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ಸದ್ರಿ ಅಭಿಯೋಜನ ಪರ ದಾಖಲೆಗಳನ್ನು ಪರಿಶೀಲಿಸಿ, ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ವಿಫಲವಾಗಿದೆ ಎಂದು ತೀರ್ಮಾನಿಸಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಽಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಪುತ್ತೂರು ದ.ಕ., ನ್ಯಾಯಾಽಶರಾದ ಗೌಡ ಆರ್.ಪಿ ಅವರು ಆರೋಪಿ ಸ್ಕೂಟರ್ ಸವಾರ ಗಣೇಶ್ ರೈ ನಿರಪರಾಧಿ ಎಂದು ಬಿಡುಗಡೆಗೊಳಿಸಿ ಆದೇಶಿಸಿರುತ್ತಾರೆ.

LEAVE A REPLY

Please enter your comment!
Please enter your name here