ಬನ್ನೂರು: ಗಾಂಜಾ ನಶೆಯಲ್ಲಿ ರಿಕ್ಷಾ ಚಾಲಕನಿಗೆ ಹಲ್ಲೆ ಆರೋಪ

0

ಪುತ್ತೂರು: ಗಾಂಜಾ ನಶೆಯಲ್ಲಿದ್ದ ಯುವಕನೋರ್ವ ರಿಕ್ಷಾ ಚಾಲಕರೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಬನ್ನೂರಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಪುತ್ತೂರು ಸಾಮೆತ್ತಡ್ಕ ನಿವಾಸಿ ಬಸ್‌ಸ್ಟಾಂಡ್ ಪಾರ್ಕ್‌ನ ರಿಕ್ಷಾ ಚಾಲಕ ಸಂತೋಷ್ ಎಂಬವರು ಹಲ್ಲೆಗೊಳಗಾದವರು. ‘ನಾನು ಪುತ್ತೂರು ಬಸ್‌ನಿಲ್ದಾಣದ ಬಳಿಯ ಪಾರ್ಕ್‌ನಿಂದ ವಿದ್ಯಾರ್ಥಿನಿಯೊಬ್ಬರನ್ನು ಬನ್ನೂರು ಅವರ ಮನೆಗೆ ಬಿಟ್ಟು ಹೊರಡುತ್ತಿದ್ದಂತೆ ದ್ವಿಚಕ್ರ ವಾಹನದಲ್ಲಿ ಬಂದ ಯುವಕನೋರ್ವ ನನಗೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಆತ ನಶೆಯಲ್ಲಿದ್ದು, ಯಾವುದೋ ಅಮಲು ಪದಾರ್ಥ ಸೇವಿಸಿದಂತೆ ಕಂಡುಬಂದಿತ್ತು. ಇದೇ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಕೆಲವರು ಆತ ನೌಫಲ್, ಆತ ಗಾಂಜಾ ನಶೆಯಲ್ಲಿದ್ದಾನೆ ಎಂದು ತಿಳಿಸಿದ್ದಾರೆ. ಗಾಯಗೊಂಡ ನಾನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ’ ಎಂದು ಸಂತೋಷ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here