ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಾಕ್ ಶ್ರವಣದೋಷ ಮತ್ತು ಕಲಿಕಾ ನ್ಯೂನ್ಯತೆ’ ಉಪನ್ಯಾಸ ಕಾರ್ಯಕ್ರಮ

0

ಪುತ್ತೂರು: ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ತೆಂಕಿಲ ಇಲ್ಲಿ ‘ವಾಕ್ ಶ್ರವಣದೋಷ ಮತ್ತು ಕಲಿಕಾ ನ್ಯೂನ್ಯತೆ’ ಉಪನ್ಯಾಸ ಕಾರ್ಯಕ್ರಮ ಏ.10ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ  ಮಂಗಳೂರು ಅಕಾಡೆಮಿ ಆಫ್ ಪ್ರೊಫೆಷನಲ್ ಸ್ಟಡೀಸ್ ಸಹಪ್ರಾಧ್ಯಾಪಕಿ ಮಾಲಾ ಮಹೇಶ್ ವೈ  ಮಾತನಾಡಿ, ಮಕ್ಕಳಲ್ಲಿ ವಾಕ್ ಶ್ರವಣ ದೋಷವು ಹುಟ್ಟಿನಿಂದಲೇ ಬರಬಹುದು ಅಥವಾ ಬೆಳೆಯುತ್ತಾ ಈ ಲಕ್ಷಣಗಳು ಕಂಡುಬರಬಹುದು. ಇಂತಹ ಸಮಸ್ಯೆಯನ್ನು ತಿದ್ದುವ ಕರ್ತವ್ಯ ಶಿಕ್ಷಕರದ್ದು, ಶಿಕ್ಷಕರಿಂದ ಸಾಧ್ಯವಾಗದೇ ಹೋದಾಗ ವೈದ್ಯರ ಸಲಹೆ ತೆಗೆದುಕೊಳ್ಳಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಅನುರಾಧ ಅಧ್ಯಕ್ಷತೆಯನ್ನು ವಹಿಸಿದ್ದರು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ಆಶಾ ಆರ್. ಸ್ವಾಗತಿಸಿ, ಅಂಜಲಿ ವಂದಿಸಿದರು . ಆಶಾ ಎಂ. ಇವರು ನಿರೂಪಿಸಿದರು.

LEAVE A REPLY

Please enter your comment!
Please enter your name here