ಕುಂಡಾಜೆ ಜಮ್ಮಾ ಮಸೀದಿಯ ಖತೀಜರಾದ ಉಸ್ತಾದ್ ಮುನೀರ್ ಅನ್ವರಿಯವರಿಗೆ ಬೀಳ್ಕೊಡುಗೆ ವಿವಾ ಪ್ಯಾಷನ್ ರವರಿಂದ ಸನ್ಮಾನ

0

ಆಲಂಕಾರು: ಕುಂಡಾಜೆ ಜುಮ್ಮಾ ಮಸೀದಿಯಲ್ಲಿ ದೀರ್ಘಕಾಲ ಖತೀಬರಾಗಿ ಸೇವೆ ಸಲ್ಲಿಸಿ ವಿದಾಯ ಹೇಳುತ್ತಿರುವ, ಮಕ್ಕಳಿಗೆ ಧಾರ್ಮಿಕ ವಿದ್ಯೆಯನ್ನು ಧಾರೆಯೆರೆದು, ಸಂಘಟನಾ ಚತುರರಾಗಿ, ಖ್ಯಾತ ಪ್ರಭಾಷಣಗಾರರಾಗಿ ಸರ್ವ ಜಮಾಅತ್ ಬಾಂಧವರನ್ನು ಕುಟುಂಬದಂತೆ ಕಂಡ ಉಸ್ತಾದ್ ಮುನೀರ್ ಅನ್ವರಿಯವರು ಕಾರಣಾಂತರಗಳಿಂದ ಬೇರೆ ಜಮ್ಮಾ ಮಸೀದಿಗೆ ಕರ್ತವ್ಯ ನಿರ್ವಹಿಸುವ ಸಲುವಾಗಿ ಕುಂಡಾಜೆ ಜಮ್ಮಾ ಮಸೀದಿಗೆ ವಿದಾಯ ಹೇಳುತ್ತಿರುವ ಸಂಧರ್ಭದಲ್ಲಿ ಗೌರವ ಪೂರ್ವಕವಾಗಿ ವಿವಾ ಫ್ಯಾಷನ್ ಮಾಲೀಕರಾದ ಸಿದ್ದೀಕ್ ಕುಂಡಾಜೆ ಮತ್ತು ರಹೀಂ ಕುಂಡಾಜೆ ಅವರು 50,000 ರೂಪಾಯಿಗಳ ಚೆಕ್ ನೀಡಿ ಗೌರವಿಸಿ ಸನ್ಮಾನಿಸಿದರು. ಹಾಗೂ ಊರಿನ “ಯಂಗ್ ಬ್ರೋಸ್” ಗ್ರೂಪಿನ ಯುವಕರು ಹಾಗೂ ಡಾ. ಝಕರಿಯಾ ಕುಂಡಾಜೆ, ನಝೀರ್ ಕುಂಡಾಜೆ ಶಾಲನ್ನು ಹೊದಿಸಿ ಸನ್ಮಾನ ಮಾಡಿದರು.

LEAVE A REPLY

Please enter your comment!
Please enter your name here