ಪುತ್ತೂರು: ಮಕ್ಕಳಲ್ಲಿರುವ ಪ್ರತಿಭೆಗಳಿಗೆ ತಕ್ಕಂತೆ ಹಲವು ರೀತಿಯ ಕಲಾ ಶಿಕ್ಷಣವನ್ನು ನಡೆಸುತ್ತಿರುವ ಪುತ್ತೂರು ಕಲ್ಲಾರೆ ಕಾವೇರಿ ಕಾಂಪ್ಲೆಕ್ಸ್‌ನಲ್ಲಿರುವ ವರ್ಣಕುಟೀರ ಕಲಾ ಶಿಕ್ಷಣದಲ್ಲಿ ಎ.13ರಿಂದ ಒಂದು ವಾರದ ಮಕ್ಕಳ ಬೇಸಿಗೆ ಶಿಬಿರವು ಆರಂಭಗೊಳ್ಳಲಿದೆ.
ಮಕ್ಕಳ ಮನೋವಿಕಾಸನ ಆಟಗಳು, ನವ್ಯಕಲೆಯ ಒಂದು ಅಧ್ಯಯನ, ಕ್ರಾಫ್ಟ್ಸ್, ಮೂರಲ್ ಆರ್ಟ್, ವಿನೂತನ ಗೋಡೆ ಗಡಿಯಾರ ತಯಾರಿ, ಕೂದಲಿನ ಸೌಂದರ್ಯ ಹೆಚ್ಚಿಸಲು ಹೇರ್‌ಕ್ಲಿಪ್ ತಯಾರಿ, 3ಡಿ ಆರ್ಟ್, ಹೊಸ ವಿನ್ಯಾಸದ ಮುಖವಾಡ ತಯಾರಿ, ವಿಶೇಷವಾಗಿ ನೀನಾಸಂ ಕಲಾವಿದರಿಂದ ರಂಗ ತರಬೇತಿ, ರಂಗಸಂಗೀತ ಕಲೆಗಳನ್ನು ಶಿಬಿರದಲ್ಲಿ ಹೇಳಿಕಕೊಡಲಾಗುವುದು. ಪ್ರತಿ ದಿನ ಬೆಳಿಗ್ಗೆ ಗಂಟೆ9.30 ರಿಂದ ಸಂಜೆ ಗಂಟೆ 4.30ರ ತನಕ ಶಿಬಿರ ನಡೆಯಲಿದ್ದು, ಮಧ್ಯಾಹ್ನದ ಊಟ, ಉಪಹಾರ ಶಿಬಿರದಲ್ಲೇ ನೀಡಲಾಗುವುದು. ಶಿಬಿರಕ್ಕೆ ಸೇರಲಿಚ್ಚಿಸುವವರು ಮೊಬೈಲ್ ಸಂಖ್ಯೆ 9741502869 ಗೆ ಕರೆ ಮಾಡುವಂತೆ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರವೀಣ್ ವರ್ಣಕುಟೀರ ಅವರು ತಿಳಿಸಿದ್ದಾರೆ.