ಪುತ್ತೂರು:ಪುತ್ತೂರಿನಲ್ಲಿ ಆಂಬುಲೆನ್ಸ್ ಚಾಲಕನಾಗಿದ್ದ ಮುಸ್ಲಿಂ ಯುವಕನೋರ್ವ ತನ್ನ ಪತ್ನಿಯೊಂದಿಗೆ ಕಾರಿನಲ್ಲಿ ಜೊತೆಗಿರುವುದನ್ನು ಪ್ರಶ್ನಿಸಿದ್ದಕ್ಕೆ ಕೆಮ್ಮಾಯಿ ಮೂಲದ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ ಆರೋಪದಲ್ಲಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿ ಸುರೇಶ್ ಭಟ್ ಎಂಬವರು ಕಾರಿನಲ್ಲಿ ಬೈಂದೂರಿನಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಂಬದ ಕೋಣೆ ಗ್ರಾಮದ ರೈಲ್ವೇ ಗೇಟ್ ಹಾಕಿದ್ದರಿಂದ ಕಾರನ್ನು ನಿಲ್ಲಿಸಿದರು.ಈ ವೇಳೆ ಅವರ ಪತ್ನಿ, ಪುತ್ತೂರಿನಲ್ಲಿ ಹಿಂದೆ ಜೈ ಭಾರತ್ ಆಂಬುಲೆನ್ಸ್ ಚಾಲಕನಾಗಿದ್ದ ಪರಿಚಯದ ಸಿರಾಜುದ್ದೀನ್ ಎಂಬಾತ ಚಲಾಯಿಸುತ್ತಿದ್ದ ನ್ಯಾನೋ ಕಾರೊಂದರಲ್ಲಿ ಇರುವುದು ಅವರ ಗಮನಕ್ಕೆ ಬಂತು.ಈ ಕುರಿತು ಅವರು ಪತ್ನಿಯಲ್ಲಿ ವಿಚಾರಿಸುತ್ತಿದ್ದ ವೇಳೆ ಸಿರಾಜುದ್ದೀನ್ ಅವರು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿ ರುವುದಾಗಿ ಆರೋಪಿಸಿ ಸುರೇಶ್ ಭಟ್ ಅವರು ಬೈಂದೂರು ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.ಘಟನೆಯಿಂದ ಗಾಯಗೊಂಡಿರುವ ಸುರೇಶ್ ಭಟ್ ಅವರು ಬೈಂದೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆರೋಪಿ ಪುತ್ತೂರಿನ ಸಿಜು ಅಲಿಯಾಸ್ ಸಿರಾಜುದ್ದೀನ್ ಯಾನೆ ಬೈಂದೂರಿನ ಸೂರಜ್‌ನನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.