ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನದ ಕಟ್ಟೆ ಹೆಸರಲ್ಲಿ 10 ಸೆಂಟ್ಸ್‌ಗೆ ಪಹಣಿ-ಅವಭೃತ ಸ್ನಾನ ಸಂದರ್ಭ ದಾಖಲೆ ಸಮರ್ಪಣೆ:ಅನ್ಯಮತೀಯ ವ್ಯಕ್ತಿಯ ಸ್ವಾಧೀನದಲ್ಲಿದ್ದ ಜಾಗ-ಸಂಧಾನದ ಮೂಲಕ ಕಟ್ಟೆ ಹೆಸರಿಗೆ

0

ಪುತ್ತೂರು:ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ಅವಭೃತ ಸ್ನಾನಕ್ಕೆ ತೆರಳುವ ವೀರಮಂಗಲದ ಕುಮಾರಧಾರ ನದಿ ಬಳಿಯ ಕಟ್ಟೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೆಸರಿಗೆ ನೋಂದಣಿ ಮಾಡಲಾಗಿದ್ದು, ಅದರ ದಾಖಲೆ ಪತ್ರಗಳ ಸಮರ್ಪಣೆ ಕಾರ್ಯಕ್ರಮ ಏ.19ರಂದು ಶ್ರೀ ದೇವರ ಅವಭೃತ ಸ್ನಾನದ ಸಂದರ್ಭ ಶ್ರೀ ದೇವರಿಗೆ ಸಮರ್ಪಣೆ ಮಾಡುವ ಕಾರ್ಯಕ್ರಮ ನಡೆಯಲಿದೆ.ಕಟ್ಟೆಯನ್ನು ದೇವಳದ ಸ್ವಾಧೀನಕ್ಕೆ ಪಡೆಯುವಲ್ಲಿ ಶ್ರಮವಹಿಸಿದ ಭಕ್ತವೃಂದ ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದೆ.


ಗತ ವರ್ಷಗಳ ಹಿಂದೆ ಅಲ್ಲಿನ ಕಟ್ಟೆ ಭಾಗಿರಥಿ ಎನ್ನುವವರ ಕುಟುಂಬಕ್ಕೆ ಸೇರಿದ್ದಾಗಿತ್ತು.ಈ ಅಶ್ವತ್ಥಕಟ್ಟೆಯಲ್ಲಿ ದೇವರು ಪೂಜೆ ಸ್ವೀಕರಿಸಿ ನದಿಯಲ್ಲಿ ಅವಭೃತ ಸ್ನಾನಕ್ಕೆ ಹೋಗುತ್ತಿದ್ದರು.ಕಾಲಕ್ರಮೇಣ ಈ ಜಾಗವನ್ನು ಅನ್ಯಮತೀಯ ಸಮುದಾಯದ ಓರ್ವರಿಗೆ ಮಾರಾಟ ಮಾಡಲಾಗಿತ್ತು.ಆ ಸಂದರ್ಭದಲ್ಲಿ, 1942 ಸಬ್ ರಿಜಿಸ್ಟರ್ ದಸ್ತಾವೇಜುನಲ್ಲಿ ಕಂಡುಬರುವ ಉಲ್ಲೇಖದಂತೆ ಕಟ್ಟೆ ವ್ಯಾಪ್ತಿಯ 10 ಸೆಂಟ್ಸ್‌ನ್ನು ಬಿಟ್ಟು ಮಾರಾಟ ಮಾಡಲಾಗಿತ್ತು.ಜಾಗ ಪ್ರಸ್ತುತ ಕಾಸಿಂ ಎಂಬವರ ಹೆಸರಲ್ಲಿತ್ತು.ಆದರೆ ಸರಕಾರಿ ದಾಖಲೆ ಪ್ರಕಾರ, ಆಗಿನ ಸರಕಾರದ ವ್ಯವಸ್ಥೆಯ ಲೋಪದೋಷದಿಂದಾಗಿ ಪಹಣಿಯಲ್ಲಿ 86 ಸೆಂಟ್ಸ್ ಬದಲು 96 ಸೆಂಟ್ಸ್ ಎಂದು ನಮೂದಾಗಿ ಕಳೆದ 48 ವರ್ಷಗಳಿಂದ ಅನ್ಯಮತೀಯರ ಹೆಸರಿನಲ್ಲಿ ಇದ್ದ ಜಾಗದ ಕಟ್ಟೆಗೆ ದೇವರು ಜಳಕಕ್ಕಾಗಿ ಹೋಗುತ್ತಿದ್ದರು.22 ವರ್ಷಗಳ ಹಿಂದೆ ಈ ವಿಚಾರ ಶ್ರೀ ಮಹಾಲಿಂಗೇಶ್ವರ ದೇವರ ಕೆಲವು ಭಕ್ತರ ಗಮನಕ್ಕೆ ಬಂದಿತ್ತು.ಈ ವಿವಾದ ಇತ್ಯರ್ಥವಾಗದೇ ಇದ್ದುದರಿಂದ ಗಣ್ಯರ ಮೂಲಕ ಅನೇಕ ಸಂಧಾನ ಸೂತ್ರಗಳು ನಡೆದರೂ ಜಾಗದ ಪಹಣಿ ಮಾಲಕ ಕಾಸಿಂ ಅವರು ರಾಜಿ ಒಪ್ಪಂದಕ್ಕೆ ಒಪ್ಪದೆ ನ್ಯಾಯಾಲಯದ ತೀರ್ಮಾನಕ್ಕಾಗಿ ಕಾಯುತ್ತಿದ್ದರು.ಈ ಸಂದರ್ಭದಲ್ಲಿ ವಿಚಾರವನ್ನು 2023ರ ಫೆಬ್ರವರಿ ತಿಂಗಳಲ್ಲಿ ಮಾಧವ ಎ.,ರತ್ನಾಕರ್ ನಾಕ್ ಮತ್ತು ಶ್ರೀಧರ್ ಪಟ್ಲ ಅವರ ಗಮನಕ್ಕೆ ತರಲಾಗಿತ್ತು.ಜಾಗದ ವಿಚಾರಕ್ಕೆ ಸಂಬಂಽಸಿ ವಕೀಲರ ಮೂಲಕ ಮಾಹಿತಿ ಪಡೆದು ಕಾಸಿಂ ಅವರನ್ನು ಕರೆಸಿ ಮಾತುಕತೆ ನಡೆಸಲಾಗಿತ್ತು.ಅವರ ಒಪ್ಪಿಗೆಯೊಂದಿಗೆ ಬಳಿಕ, ಎಸಿಯವರಿಗೆ ಮನವಿ ಮಾಡಿ ಹತ್ತು ಸೆಂಟ್ಸ್ ಜಾಗವನ್ನು ಶ್ರೀ ಮಹಾಲಿಂಗೇಶ್ವರ ದೇವರ ಹೆಸರಿಗೆ ಪಹಣಿ 17/10ನ್ನು ‘ಪುತ್ತೂರು ಶ್ರೀ ಮಹಾಲಿಂಗೇಶ್ವರ ಅವಭೃತ ಸ್ನಾನದ ಕಟ್ಟೆ’ ಹೆಸರಲ್ಲಿ ಆರ್‌ಟಿಸಿ ಮಾಡಲಾಗಿದೆ.ಇದೇ ಸಂದರ್ಭ ಆ ಪರಿಸರದಲ್ಲಿ ಇದ್ದ ಇನ್ನೂ ಹೆಚ್ಚುವರಿ 5 ಸೆಂಟ್ಸ್ ಜಾಗವನ್ನು ಕಾಸಿಂ ಅವರಿಂದ ಕ್ರಯಕ್ಕೆ ಪಡೆಯಲಾಗಿದೆ.ಅದರ ಸಂಪೂರ್ಣ ವೆಚ್ಚವನ್ನು ಮಾಧವ ಅವರೇ ಭರಿಸಿದ್ದಾರೆ.ಕಳೆದ ಏಪ್ರಿಲ್ ಜಾತ್ರೆಯ ಸಮಯದಲ್ಲಿ ಅಂದಿನ ಕಾರ್ಯನಿರ್ವಹಣಾಽಕಾರಿ ನವೀನ್ ಭಂಡಾರಿಯವರ ಮುಖಾಂತರ 12 ಲಕ್ಷ ರೂ.ವೆಚ್ಚದಲ್ಲಿ ಕಟ್ಟೆಗೆ ತಡೆಗೋಡೆ, ಇಂಟರ್ ಲಾಕ್‌ನ್ನು ನವೀನ್‌ಚಂದ್ರ ರೈ ಎಣ್ಮೂರುಗುತ್ತು ಅವರ ಮೂಲಕ ಅಳವಡಿಸಲಾಯಿತು.ರಂಜಿತ್ ಬಂಗೇರ ಅಭಯ ಮಾರ್ಬಲ್ ಮಂಗಳೂರು, ಪ್ರಶಾಂತ್ ನಾಯಕ್ ಕೊಡಿಪ್ಪಾಡಿ, ಸುಬ್ರಹ್ಮಣ್ಯ ಕೆಮ್ಮಿಂಜೆ, ಎ.ಮಾಧವ ಸ್ವಾಮಿ ಅವರ ಸಹಕಾರದೊಂದಿಗೆ ಕಟ್ಟೆಯನ್ನು ನವೀಕರಿಸಲಾಯಿತು.ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ದೇವಳದ ಅಂದಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರ ಮೂಲಕ ಕಟ್ಟೆ ಶುದ್ದೀಕರಣಗೊಳಿಸಿ ಪೂಜೆ ಪುನಸ್ಕಾರಗಳನ್ನು ಮಾಡಿ ಸಾರ್ವಜನಿಕ ಅನ್ನಸಂತರ್ಪಣೆ ಮಾಡಿ ಕಟ್ಟೆಯನ್ನು ದೇವರಿಗೆ ಸಮರ್ಪಣೆ ಮಾಡಲಾಯಿತು.ಆಗಿನ ಶಾಸಕ ಸಂಜೀವ ಮಠಂದೂರು ಅವರ ಮೂಲಕ ಸಣ್ಣ ನೀರಾವರಿ ಇಲಾಖೆಯಿಂದ ರೂ.50 ಲಕ್ಷದ ಅನುದಾನವನ್ನು ತರಿಸಿ ಕಟ್ಟೆಯ ಎದುರು ಭಾಗದ ಆಕಾರದಲ್ಲಿ ತಡೆಗೋಡೆ ನಿರ್ಮಿಸಿ ಅಽಕ ಜಾಗದ ವ್ಯವಸ್ಥೆಯನ್ನು ಮಾಡಿಸಿ ಕೊಟ್ಟರು.ವಿಷ್ಣುಮೂರ್ತಿ ದೇವಸ್ಥಾನದ ರಸ್ತೆಯಿಂದ ವೀರಮಂಗಲ ದೇವರ ಅವಭೃತ ಸ್ನಾನದ ಕಟ್ಟೆಗೆ ಹೋಗುವ 500 ಮೀಟರ್ ರಸ್ತೆಗೆ ಬೇಡಿಕೆಯ ಮೇರೆಗೆ ಶಾಸಕ ಅಶೋಕ್ ಕುಮಾರ್ ರೈರವರ ರೂ.20 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ.ಈ ಎಲ್ಲಾ ವ್ಯವಸ್ಥೆಯಾದ ಬಳಿಕ ಮುಂದೆ ಶ್ರೀ ಮಹಾಲಿಂಗೇಶ್ವರ ದೇವರು ವೀರಮಂಗಲ ದೇವರ ಕಟ್ಟೆಯಲ್ಲಿ ಅವಭೃತ ಸ್ನಾನಕ್ಕಾಗಿ ಪೂಜೆ ಸ್ವೀಕರಿಸುವ ಸಮಯದಲ್ಲಿ ಮಾಧವ ಅವರ ಹೆಸರಲ್ಲಿ ಶಾಶ್ವತ ಪೂಜೆ ಮಾಡಿ ಪ್ರಸಾದ ನೀಡಲು ಅಡಳಿತ ಮಂಡಳಿ ನಿರ್ಣಯವನ್ನು ಮಾಡಿದೆ.ಈ ದೇವರ ಕಾರ್ಯಕ್ಕೆ ದೇವರ ಭಕ್ತರಾದ ನ್ಯಾಯವಾದಿಗಳಾದ ಚಿದಾನಂದ ಬೈಲಾಡಿ, ಶಿವಪ್ರಸಾದ್, ಸೂರ್ಯನಾರಾಯಣ ಹಾಗೂ ಭಾಮಿ ಅಶೋಕ ಶೆಣೈ, ರಂಜಿತ್ ಜೈನ್, ಸದಾನಂದ ನಾಯ್ಕ ಮುಕ್ರಂಪಾಡಿ, ಮುಳಿಯ ಕೇಶವ ಪ್ರಸಾದ್ ಮತ್ತು ಆಗಿನ ಆಡಳಿತ ಮಂಡಳಿಯ ಸದಸ್ಯರು, ಬಾಲಚಂದ್ರ ಸೊರಕೆ, ಧರ್ಣಪ್ಪ ಗೌಡ ವೀರಮಂಗಲ ಮತ್ತು ಮಹಾಬಲ ರೈ ವೀರಮಂಗಲ, ಶೀನಪ್ಪ ಮಲ್ಯ ವೀರಮಂಗಲ, ದೇವಳದ ಹಿಂದಿನ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ದಿ.ಉಮಾಕಾಂತ ರಾವ್ ಸಹಕಾರ ನೀಡಿದ್ದರು ಎಂದು ದಿನೇಶ್ ಜೈನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಭಕ್ತವೃಂದದ ಪರ ಪ್ರಮುಖರಾದ ರತ್ನಾಕರ ನಾಯ್ಕ್, ಮಾಧವ ಎ., ಶ್ರೀಧರ ಪಟ್ಲ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here