ಬನ್ನೂರು: ರಸ್ತೆಗೆ ಅಡ್ಡ ಬಂದ ನಾಯಿ- ಸ್ಕೂಟರ್ ಪಲ್ಟಿ

0

ಪುತ್ತೂರು:ರಸ್ತೆಯೊಂದಕ್ಕೆ ಏಕಾಏಕಿ ನಾಯಿಯೊಂದು ಅಡ್ಡ ಬಂದ ಪರಿಣಾಮ ಸ್ಕೂಟರ್ ಪಲ್ಟಿಯಾಗಿ ಇಬ್ಬರಿಗೆ ಗಾಯವಾದ ಘಟನೆ ಬನ್ನೂರಿನಿಂದ ವರದಿಯಾಗಿದೆ.
ಬಿ.ಮಹಮ್ಮದ್ ಅನ್ವರ್ ಎಂಬವರು ಬನ್ನೂರು ರಸ್ತೆಯಲ್ಲಿ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ರಸ್ತೆ ಮಧ್ಯಕ್ಕೆ ನಾಯಿಯೊಂದು ಬಂದಾಗ ಸ್ಕೂಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಘಟನೆಯಿಂದಾಗಿ ಸ್ಕೂಟರ್ ಸವಾರ ಬಿ.ಮಹಮ್ಮದ್ ಅನ್ವರ್ ಮತ್ತು ಸಹಸವಾರ ಬನ್ನೂರು ಗ್ರಾಮದ ಮಹಮ್ಮದ್ ಶರೀಫ್ ಬಿ ಎಂಬವರು ಗಾಯಗೊಂಡಿದ್ದಾರೆ.ಗಾಯಾಳುಗಳು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here