ಪುತ್ತೂರು ಕ್ರಿಕೆಟ್ ಅಕಾಡೆಮಿಯಿಂದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಪ್ರಾರಂಭ

0

ಕ್ರಿಕೆಟ್ ಕ್ಷೇತ್ರದಲ್ಲಿ 45 ವರ್ಷಗಳ ಅನುಭವ, 15 ವರ್ಷಗಳಿಂದ ತರಬೇತಿ

ಪುತ್ತೂರು:ಕಳೆದ 15 ವರ್ಷಗಳಿಂದ ಕ್ರಿಕೆಟ್ ತರಬೇತಿ ನೀಡಿ ಜಿಲ್ಲೆ ರಾಜ್ಯ, ಅಂತರಾಜ್ಯ ಮಟ್ಟದ ಕ್ರಿಕೆಟ್ ಪಟುಗಳನ್ನು ತಯಾರಿಸಿದ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಪುತ್ತೂರು ಕ್ರಿಕೆಟ್ ಅಕಾಡೆಮಿ’ಯಿಂದ 40 ದಿನಗಳ ಕಾಲ ನಡೆಯಲಿರುವ ಕ್ರಿಕೆಟ್ ತರಬೇತಿಯ ಬೇಸಿಗೆ ಶಿಬಿರವು ಏ.1ರಿಂದ ತೆಂಕಿಲ ವಿವೇಕಾನಂದ ವಿದ್ಯಾ ಸಂಸ್ಥೆಗಳ ಕ್ರೀಡಾಂಗಣದಲ್ಲಿ ಪ್ರಾರಂಭಗೊಂಡಿದೆ.


ಕರ್ನಾಟಕ ರಾಜ್ಯ ಅಸೋಸಿಯೇಶನ್ ಬೆಂಗಳೂರು ಇದರ ಮಂಗಳೂರು ವಲಯದಿಂದ ಮಾನ್ಯತೆ ಪಡೆದ ಕ್ರಿಕೆಟ್ ತರಬೇತಿ ಸಂಸ್ಥೆ ಪುತ್ತೂರು ಕ್ರಿಕೆಟ್ ಆಕಾಡೆಮಿಯಿಂದ ಪ್ರತಿವರ್ಷ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ಆಯೋಚಿಸಿಕೊಳ್ಳುತ್ತಿದೆ. ಕ್ರಿಕೇಟ್ ಕ್ಷೇತ್ರದಲ್ಲಿ ಸುಧೀರ್ಘ 45 ವರ್ಷಗಳ ಅನುಭವನಗಳೊಂದಿಗೆ ಕಳೆದ 15 ವರ್ಷಗಳಿಂದ ತರಬೇತಿ ನಿರಂತರವಾಗಿ ನೀಡಲಾಗುತ್ತಿದೆ.


ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಸಂಸ್ಥೆಯಲ್ಲಿ 6 ವರ್ಷ ಮೇಲ್ಪಟ್ಟ ಹುಡುಗ, ಹುಡುಗಿಯರಿಗೆ ತರಬೇತಿ ಪಡೆಯಬಹುದಾಗಿದೆ. ತರಬೇತುದಾರರಾಗಿರುವ ಹರೀಶ್ಚಂದ್ರ ಆಚಾರ್ಯ ಉತ್ತಮ ತರಬೇತಿ ನೀಡಲಿದ್ದಾರೆ. ಪ್ರತಿದಿನ ಬೆಳಿಗ್ಗೆ 6ರಿಂದ8 ಗಂಟೆ ಹಾಗೂ ಸಂಜೆ 3ರಿಂದ6 ಗಂಟೆ ಅವಧಿಯ ಎರಡು ಬ್ಯಾಚ್‌ನಲ್ಲಿ ತರಬೇತಿ ನೀಡಲಾಗುವುದು. ಶಿಬಿರವು ಎ.1ರಿಂದ ಪ್ರಾರಂಭಗೊಂಡು ಮೇ.10ರ ತನಕ ನಡೆಯಲಿದೆ.


ಪುತ್ತೂರು ಕ್ರಿಕೆಟ್ ಆಕಾಡೆಮಿಯಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ವಲಯ, ಜಿಲ್ಲೆ, ರಾಜ್ಯ, ವಿಶ್ವವಿದ್ಯಾನಿಲಯ ಮಟ್ಟ ಮಾತ್ರವಲ್ಲದೆ ಗೋವಾ, ಜೈಪುರ್, ದೆಹಲಿ, ತೆಲಂಗಾಣ, ಬಿಹಾರ್ ಮೊದಲಾದ ರಾಜ್ಯಗಳಲ್ಲಿ ನಡೆದ ಅಂತರಾಜ್ಯ ಮಟ್ಟದ ಪ್ರದರ್ಶನ ನೀಡುವಂತೆ ಉತ್ತಮ ಕ್ರೀಡಾಪಟುಗಳನ್ನು ತಯಾರಿಸಿದ ಹೆಗ್ಗಳಿಕೆ ಪಡೆದ ಸಂಸ್ಥೆಯಾಗಿದೆ. ಬೇಸಿಗೆ ಕ್ರಿಕೆಟ್ ತರಬೇತಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳನ್ನು ಜಿಲ್ಲೆ ಹಾಗೂ ರಾಜ್ಯ ವಲಯದ ಪ್ರಮುಖ ಕ್ರಿಕೆಟ್ ಟೂರ್ನ್ ಮೆಂಟ್‌ಗಳಿಗೆ ಸಂಸ್ಥೆಯ ಮುಖಾಂತರ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗುವುದು ಹಾಗೂ ಕ್ರಿಕೆಟ್‌ನಲ್ಲಿ ಉನ್ನತ ಶ್ರೇಣಿ ಪಡೆದುಕೊಳ್ಳಲು ಪೂರಕವಾದ ಪ್ರೋತ್ಸಾಹ ನೀಡಲಾಗುತ್ತಿದೆ. ತರಬೇತಿ ಪಡೆಯಲು ಆಸಕ್ತರು ಮಹಿತಿಗಾಗಿ 9036222207, 9480016050 ನಂಬರನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here