ಪುತ್ತೂರು: ಮೈಸೂರಿನ ಜೆ.ಎಸ್.ಎಸ್. ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಡಾ. ಕೃತಿಕಾ ಆರ್. ಐತಾಳ್ ಅವರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಡೆಸಿದ ಪ್ರಥಮ ವರ್ಷದ ಎಂ.ಡಿ. ಆಯುರ್ವೇದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಹೈದರಾಬಾದ್ ನಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಮಟ್ಟದ ಸ್ವಾಸ್ತ್ಯ ಆಯುಷ್ ಎಕ್ಸ್ ಪೋನಲ್ಲಿ ಬೆಸ್ಟ್ ಓರಲ್ ಪೇಪರ್ ಪ್ರೆಸೆಂಟೇಟರ್ ಆಗಿ ತೆಲಂಗಾಣದ ಮಾಜಿ ರಾಜ್ಯಪಾಲರಾದ ಡಾ. ತಮಿಳಾಸೈ ಸೌಂದರಾಜನ್ ಅವರಿಂದ ಪ್ರಶಸ್ತಿ ಸ್ವೀಕಾರ ಮಾಡಿರುವ ಕೃತಿಕಾ ಆರ್.ಐತಾಳ್ ಅವರು ಪುತ್ತೂರಿನ ಖ್ಯಾತ ಉರಗತಜ್ಞ ಡಾ.ರವೀಂದ್ರನಾಥ್ ಐತಾಳ್ ಹಾಗೂ ವಸಂತಿ ಐತಾಳ್ ದಂಪತಿಯ ಪುತ್ರಿಯಾಗಿದ್ದು ಲಿಟ್ಲ್ ಫ್ಲವರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸಂತ ಫಿಲೋಮಿನಾ ಶಾಲೆಯಲ್ಲಿ ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ, ಮೂಡಬಿದ್ರೆ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಬಿಎಎಂಎಸ್ ಪದವಿ ಪಡೆದಿದ್ದಾರೆ.