ಗ್ರಾಮ ಸ್ವರಾಜ್ಯ ಆಶಯದೊಂದಿಗೆ ಜನಾಂದೋಲನ- ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಾ.ಯು.ಪಿ.ಶಿವಾನಂದ್

0

ಪುತ್ತೂರು: ಮಹಾತ್ಮಾಗಾಂಧಿಜಿಯವರ ಆಶಯದ ಹಳ್ಳಿಯಿಂದ ಡೆಲ್ಲಿಗೆ ಆಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಅಭಿಯಾನವನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜನಜಾಗೃತಿ ಕಾರ್ಯಕ್ಕೆ ಮುಂದಾಗಿರುವ ಸುದ್ದಿ ಜನಾಂದೋಲನ ವೇದಿಕೆಯ ಅಧ್ಯಕ್ಷ ಡಾ. ಯು.ಪಿ.ಶಿವಾನಂದರು ಎ.13ರಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಶಿವಮೊಗ್ಗದ ಹೆಚ್ಚಿನ ಎಲ್ಲಾ ಪತ್ರಿಕೆಗಳಲ್ಲಿ ಇದರ ವರದಿ ಆದ್ಯತೆಯಲ್ಲಿ ಪ್ರಕಟವಾಗಿದ್ದು, ನಾವಿಕ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ. ಶಿವಮೊಗ್ಗದ ಹಲವಾರು ಪತ್ರಕರ್ತರು, ಗಾಂಽ ಚಿಂತನೆಯ ವ್ಯಕ್ತಿಗಳು ಡಾ| ಶಿವಾನಂದರ ಈ ಜನಜಾಗೃತಿಯ ಬಗ್ಗೆ ಆಸಕ್ತಿ ತೋರಿದ್ದು ಸಹಕಾರ ನೀಡಲು ಹಲವರು ಮುಂದೆ ಬಂದಿದ್ದಾರೆ.

ಚುನಾವಣೆಯನ್ನೇ ವೇದಿಕೆಯನ್ನಾಗಿಸಿಕೊಂಡು ಜನರನ್ನು ರಾಜರನ್ನಾಗಿಸುವ ಜನಾಂದೋಲನಕ್ಕಾಗಿ ಲಂಚ, ಭ್ರಷ್ಟಾಚಾರ ಮುಕ್ತ ನಾಡಿಗಾಗಿ ಒಂದು ಬಹುದೊಡ್ಡ ಆಂದೋಲನವನ್ನು ರೂಪಿಸಿದ್ದೇವೆ ಎಂದು ಪುತ್ತೂರಿನ ಸುದ್ದಿ ಜನಾಂದೋಲನ ವೇದಿಕೆಯ ಮುಖ್ಯಸ್ಥ ಡಾ.ಯು.ಪಿ. ಶಿವಾನಂದ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಾಂಧಿಜಿಯವರ ಗ್ರಾಮ ಸ್ವರಾಜ್ಯದ ಆಶಯವನ್ನು ಇಟ್ಟುಕೊಂಡು ಹಳ್ಳಿಯಿಂದ ದಿಲ್ಲಿಗೆ ಆಡಳಿತಕ್ಕಾಗಿ ಭ್ರಷ್ಟಾಚಾರ ಮುಕ್ತ ನಾಡಿಗಾಗಿ ಸಾಮಾಜಿಕ ಜಾಲತಾಣದ ದುರುಪಯೋಗಗಳ ವಿರುದ್ಧ ಮತದಾರರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ ಎಂದರು.


ಇದಕ್ಕಾಗಿ ಶಿವಮೊಗ್ಗ ಚುನಾವಣೆಯನ್ನು ವೇದಿಕೆಯಾಗಿ ಉಪಯೋಗಿಸಿಕೊಳ್ಳಬಹುದೇ ಎಂಬ ಚಿಂತನೆಯೂ ಇದೆ. ನಮ್ಮ ವೇದಿಕೆಯ ಮೂಲಕ ಪಕ್ಷೇತರ ಅಭ್ಯರ್ಥಿಯೊಬ್ಬರನ್ನು ನಿಲ್ಲಿಸಿ ಈ ಆಂದೋಲನವನ್ನು ಚಳುವಳಿಯ ಮೂಲಕ ಮಾಡುವುದು ನಮ್ಮ ಆಶಯ ಎಂದ ಅವರು, ಈ ಹಿನ್ನಲೆಯಲ್ಲಿಯೇ ನಾನು ಈ ಹಿಂದೆ ಗ್ರಾಮ ಸ್ವರಾಜ್ಯದ ಬಗ್ಗೆ ಕಲ್ಪನೆ ಮೂಡಿಸುವ ದೃಷ್ಟಿಯಿಂದ ಪ್ರಧಾನಿ ಮೋದಿಯವರ ವಿರುದ್ದ ಹಾಗೂ ರಾಹುಲ್ ಗಾಂಧಿಯವರ ವಿರುದ್ಧ ಸ್ಪರ್ಧಿಸಿ ಜಾಗೃತಿ ಉಂಟುಮಾಡಲು ಪ್ರಯತ್ನಿಸಿದ್ದೇನೆ ಎಂದರು.
ಅಷ್ಟೇ ಅಲ್ಲ ಈ ಹಿಂದೆಯೂ ಕೂಡ ರಾಮಕೃಷ್ಣ ಹೆಗಡೆ, ಬಂಗಾರಪ್ಪ, ವೀರಪ್ಪ ಮೊಯ್ಲಿ ಮುಂತಾದವರ ಎದುರು ಸ್ಪಽಸಿ ನನಗಾಗಿ ಓಟು ಕೇಳದೆ ಭ್ರಷ್ಟಾಚಾರದ ವಿರುದ್ಧ ಪ್ರಚಾರ ಮಾಡಿದ್ದೇನೆ. ಮತ್ತು ಇದರಿಂದ ಒಂದಿಷ್ಟು ಲಾಭವೂ ನನಗಾಗಿದೆ ಎಂದರು.


ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಈ ಆಂದೋಲನವನ್ನು ಗಟ್ಟಿಯಾಗಿ ಆರಂಭಿಸಿ ಮಾಧ್ಯಮ ಮಿತ್ರರನ್ನು ತೊಡಗಿಸಿಕೊಳ್ಳುವಂತೆ ಮಾಡಿ ಜನಾಭಿಪ್ರಾಯವನ್ನು ಸಂಗ್ರಹಿಸುವುದು ಮತ್ತು ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಮೂಡಿಸುವುದು ನಮ್ಮ ಚಿಂತನೆಯಾಗಿದೆ.
ನಾವು ಹಲವು ಬಾರಿ ಅಭ್ಯರ್ಥಿಗಳನ್ನು ನಿಲ್ಲಿಸುವುದಿಲ್ಲ. ಒಂದು ಪಕ್ಷ ಅಭ್ಯರ್ಥಿಯನ್ನು ನಿಲ್ಲಿಸಬೇಕಾಗಿ ಬಂದರೂ ಕೂಡ ಅಭ್ಯರ್ಥಿಗಾಗಿ ಓಟು ಕೇಳುವುದಿಲ್ಲ. ಆದರೂ ನಾವು ಪ್ರಚಾರ ಮಾಡುತ್ತೇವೆ. ಪ್ರಚಾರ ಮುಖ್ಯವಾಗಿ ಮತದಾರರಲ್ಲಿ ಜಾಗೃತಿ ಮೂಡಿಸುವುದೇ ಆಗಿರುತ್ತದೆ ಎಂದರು.
ಮತದಾರರು ಗುಲಾಮರಲ್ಲ ಜನಪ್ರತಿನಿಧಿ ರಾಜನಲ್ಲ, ಜನ ಸೇವಕ, ಅಧಿಕಾರಿಗಳು ಇರುವುದು ದಬ್ಬಾಳಿಕೆ ಮಾಡುವುದಕ್ಕೆ ಅಲ್ಲ ಯಾರನ್ನೂ ಸೋಲಿಸಲು, ಯಾರನ್ನೋ ಗೆಲ್ಲಿಸಲು ನಮ್ಮ ಸ್ಪರ್ಧೆ ಇರುವುದಿಲ್ಲ. ಭ್ರಷ್ಟಾಚಾರ ಮುಕ್ತವಾದರೆ ಅದೇ ನಮ್ಮ ಗೆಲುವು ಎಂದರು.

ಶಿವಮೊಗ್ಗದ ಈ ಕೆಳಗಿನ ಪತ್ರಿಕೆಗಳಲ್ಲಿ ಅಲ್ಲದೆ ಇನ್ನಿತರ ಹಲವು ಪತ್ರಿಕೆಗಳಲ್ಲಿ ಡಾ.ಶಿವಾನಂದರ ಪತ್ರಿಕಾಗೋಷ್ಠಿಯ ವರದಿ ಪ್ರಕಟವಾಗಿದೆ.

ನಮ್ಮ ವೇದಿಕೆಯ ಮೂಲಕ ಜನಾಂದೋಲನಕ್ಕಾಗಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲು ಯಾರಾದರೂ ಸಿಗುತ್ತಾರೆಯೇ? ಎಂದು ನೋಡುತ್ತಿದ್ದೇನೆ. ಸಿಕ್ಕರೆ ಪಕ್ಷೇತರರಾಗಿ ನಿಂತು ಚುನಾವಣೆಯಲ್ಲಿ ನಿಂತ ಇತರ ಎಲ್ಲಾ ಅಭ್ಯರ್ಥಿಗಳನ್ನು ಆಂದೊಲನದ ಪರ ನಿಲ್ಲುವಂತೆ ಮಾಡಿ ಮತದಾರರನ್ನೇ ರಾಜರನ್ನಾಗಿ ಮಾಡುವುದು ನಮ್ಮ ಗುರಿ.

LEAVE A REPLY

Please enter your comment!
Please enter your name here