ಪಾಲ್ತಾಡಿ : ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ನೇಮೋತ್ಸವಕ್ಕೆ ಗೊನೆ ಮುಹೂರ್ತ

0

ಎ.22ರಿಂದ ಎ.24ರವರೆಗೆ ನೇಮೋತ್ಸವ

ಸವಣೂರು : ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ(ಮಾಡ) ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಎ.22ರಿಂದ ಎ.24ರವರೆಗೆ ನಡೆಯಲಿರುವ ಧರ್ಮರಸು ಉಳ್ಳಾಕುಲು ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವಕ್ಕೆ ಗೊನೆ ಮುಹೂರ್ತ ನಡೆಯಿತು.

ಈ ಸಂದರ್ಭದಲ್ಲಿ ದೈಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷರೂ ,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಅಧ್ಯಕ್ಷರಾದ ಸಂಜೀವ ಗೌಡ ಪಾಲ್ತಾಡಿ, ಉಪಾಧ್ಯಕ್ಷರಾದ ರಘುನಾಥ ರೈ ನಡುಕೂಟೇಲು ,ಮೋನಪ್ಪ ಗೌಡ ಪಾರ್ಲ,ವಿಠಲ ಶೆಟ್ಟಿ ಪಾಲ್ತಾಡಿ ,ಸೀತಾರಾಮ ರೈ ಕಲಾಯಿ,ಪ್ರವೀಣ್ ರೈ ನಡುಕೂಟೇಲು,ಕಾರ್ಯದರ್ಶಿ ವಿನಯಚಂದ್ರ ಕೆಳಗಿನಮನೆ,ಜತೆ ಕಾರ್ಯದರ್ಶಿ ಕರುಣಾಕರ ಕಲ್ಲಕಟ್ಟ,ಖಜಾಂಜಿ ಜಯರಾಮ ಗೌಡ ದೊಡ್ಡಮನೆ,ಆರು ಮನೆಯವರಾದ ವಿನೋದ್ ರೈ ಪಾಲ್ತಾಡು,ಮೋನಪ್ಪ ಗೌಡ ದೊಡ್ಡಮನೆ,ಪ್ರತೀಕ್ ಗೌಡ ಖಂಡಿಗೆ,ರಾಮಕೃಷ್ಣ ಗೌಡ ಅಂಗಡಿಹಿತ್ಲು,ಉಳ್ಳಾಕುಲು ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ತಾರಾನಾಥ ಬೊಳಿಯಾಲ,ಕಾರ್ಯದರ್ಶಿ ಗಣೇಶ್ ಅಮೆಚ್ಚೋಡು ಮೊದಲಾದವರಿದ್ದರು.

LEAVE A REPLY

Please enter your comment!
Please enter your name here