ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಪ್ರಯುಕ್ತ ಏ.16 ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ” ಕುಂಚ ಗಾನ” ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ನಿಲಿಷ್ಕಾ ಕೆ. ಸುಪ್ರಜಾ ರಾವ್, ಅವನಿ ಎಸ್ ವಿ, ಅಮೃತ ಎಸ್ ವಿ , ಯಶ್ವಿ ನಾಯ್ಕ್, ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಭಕ್ತಿ ಗೀತೆಗಳನ್ನು ಹಾಡಿದರು.
ಎಲ್ಲಾ ವಿದ್ಯಾರ್ಥಿಗಳು ಕೂಡ ಶಾಲಾ ಹಂತಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ಶೈಕ್ಷಣಿಕ ಸ್ಪರ್ಧೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಕು| ನಿಲಿಷ್ಕಾ ಕೆ.ರವರು ಚಿತ್ರಕಲೆ ಸ್ಪರ್ಧೆಯಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾಗಿ ಅತ್ಯುತ್ತಮ ಹೆಸರನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿನಿ. ಈಕೆ ಕೇರಳ ಹಾಗೂ ನಮ್ಮ ರಾಜ್ಯದ ಅನೇಕ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಡು ಹಾಗೂ ನೃತ್ಯದ ಜೊತೆಗೆ ಆರಾಧ್ಯಮೂರ್ತಿ ಶಿವನ ಹಾಗೂ ಕೊರಗಜ್ಜನ ಇನ್ನಿತರ ಚಿತ್ರಗಳನ್ನು ಲೈವ್ ಆಗಿ ಬರೆಯುವ ಮೂಲಕ ಸಂಘಟಕರ ಹಾಗೂ ಭಕ್ತಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದಾಳೆ.
ಅಲ್ಲದೆ ನಿಲಿಷ್ಕಾರವರು ಪುತ್ತೂರಿನಲ್ಲಿ ನಡೆದ ಜಾತ್ರೋತ್ಸವ ಕಾರ್ಯಕ್ರಮದಲ್ಲಿಯೂ ಆದಿಯೋಗಿ ಶಿವನ ಚಿತ್ರವನ್ನು ಬರೆಯುವುದರ ಜೊತೆಗೆ ಭಕ್ತಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.