ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಏ.16ರಂದು ಪಾತ್ರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಸೂಟೆಯ ಬೆಳಕಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮನವಾಯಿತು.
ಸೂಟೆಯ ಬೆಳಕಿನಲ್ಲೇ ಬಲ್ನಾಡಿನಿಂದ ಶ್ರೀ ಮಹಾಲಿಂಗೇಶ್ವರ ದೇವರ ಕ್ಷೇತ್ರಕ್ಕೆ ಬಂದ ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರು ಜಾತ್ರೆಯಲ್ಲಿ ಪಾಲ್ಗೊಂಡರು. ಕಿರುವಾಳು ಮೆರವಣಿಗೆಯ ದಾರಿ ಮಧ್ಯೆ ಭಕ್ತರು ಸಾಲು ಸಾಲಾಗಿ ಆರತಿ ನೆರವೇರಿಸಿದರು. ಕಿರುವಾಳು ದೇವಳಕ್ಕೆ ತಲುಪಿದ ಬಳಿಕ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಶ್ರೀಧರ್ ತಂತ್ರಿಯವರ ವೈದಿಕತ್ವದಲ್ಲಿ ರಾತ್ರಿಯಿಂದ ಬೆಳಗ್ಗಿನ ಜಾವದ ತನಕ ಉತ್ಸವಾದಿಗಳು ನಡೆಯಿತು.
ಭಂಡಾರದ ಬೆಳಗ್ಗಿನಿಂದಲೇ ಮೆಲ್ಲಿಗೆ ಸ್ವೀಕಾರ:
ಕಿರುವಾಳು ಆಗಮನಕ್ಕೆ ಸಂಬಂಧಿಸಿ ಉಳ್ಳಾಲ್ತಿ ಅಮ್ಮನವರಿಗೆ ಬೆಳಗ್ಗಿನಿಂದಲೇ ಭಕ್ತರು ಮಲ್ಲಿಗೆ ಸಮರ್ಪಿಸುತ್ತಿದ್ದರು. ಬೆಳಗ್ಗಿನಿಂದಲೇ ಭಕ್ತರಿಗೆ ದೈವಗಳ ಭಂಡಾರದ ಸ್ಥಾನದಲ್ಲಿ ಸಮರ್ಪಣೆಗೆ ಅವಕಾಶ ನೀಡಲಾಯಿತು. ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಆಡಳಿತಾಧಿಕಾರಿ ದೇವಪ್ಪ ಪಿ.ಆರ್, ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ತಿಮ್ಮಪ್ಪ ಗೌಡ, ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ಸದಸ್ಯರಾದ ಚಿದಾನಂದ ಬೈಲಾಡಿ, ಅರ್ಚಕರು ವಿವಿಧ ವ್ಯವಸ್ಥೆ ನೆರವೇರಿಸಿದರು. ಸಂಜೆ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ಹರೀಶ್ ಶೆಟ್ಟಿ, ಭಂಡಾರದ ಸ್ಥಾನಕ್ಕೆ ತೆರಳಿ ದೇವಳದ ಕಡೆಯಿಂದ ಮಲ್ಲಿಗೆ ಸಮರ್ಪಣೆ ಮಾಡಿದರು.
ಮಲ್ಲಿಗೆ ಕಂಪಿನೊಂದಿಗೆ ಆಗಮಿಸಿದ ಕಿರುವಾಳು:
ಸಂಜೆ ಗಂಟೆ 6ಕ್ಕೆ ಬಲ್ನಾಡು ದೈವಗಳ ಭಂಡಾರದ ಸ್ಥಾನದಿಂದ ಹೊರಟ ಕಿರುನಾಳು ರಾತ್ರಿ ಸುಮಾರು 8.35ಕ್ಕೆ ಕರ್ಕುಂಜ ತಲುಪಿ ಅಲ್ಲಿಂದ ಸುಮಾರು ಗಂಟೆ 9.28ಕ್ಕೆ ಬಪ್ಪಳಿಗೆ ತಲುಪಿತ್ತು 10.15ಕ್ಕೆ ಮಹಿಳಾ ಪೊಲೀಸ್ ಠಾಣೆಯ ಬಳಿಯ ಅಂಕದಕಟ್ಟೆಗೆ ಬಂದು ಅಲ್ಲಿ ಭಕ್ತರು ಸಮರ್ಪಣೆ ಮಾಡಿದ ಮಲ್ಲಿಗೆ ಸ್ವೀಕಾರ ಮಾಡಿ ದೇವಳಕ್ಕೆ ಪುಷ್ಕರಣಿಯ ಭಾಗದಿಂದ ಆಗಮಿಸಿ ಗಂಟೆ 10.46ಕ್ಕೆ ಶ್ರೀ ಉಳ್ಳಾಲ್ತಿ ನಡೆಯ ಬಳಿ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿ ನಡೆಯಿತು.
ಈ ಸಂದರ್ಭದಲ್ಲಿ ಉಳ್ಳಾಲ್ತಿಯ ಪಾತ್ರಿಯಾಗಿ ಕೃಷ್ಣರಾಜ್, ದಂಡನಾಯಕ ಪಾತ್ರಿಯಾಗಿ ಪರಮೇಶ್ವರ ಗೌಡ, ಮಲರಾಯನ ಪಾತ್ರಿಯಾಗಿ ತೀರ್ಥಪ್ರಸಾದ್, ಕಲ್ಲುರ್ಟಿ ಪಾತ್ರಿಯಾಗಿ ಅಚ್ಚುತ ಗೌಡ, ಅಲ್ಲದೆ ಬೆಳಿಯಪ್ಪ ಗೌಡ, ಲೋಕೇಶ್ ಗೌಡ, ಮಂಜಪ್ಪ ಗೌಡ ಕುಕ್ಕುತ್ತಡಿ, ಉಮೇಶ್ ಗೌಡ ಅವರು ಸಂಪ್ರದಾಯದಂತೆ ಪಾತ್ರಿಗಳಾಗಿ ಸಹಕರಿಸಿದರು. ದೇವಸ್ಥಾನದ ಪ್ರಧಾನ ಆರ್ಚಕ ರವಿಚಂದ್ರ ನೆಲ್ಲಿತ್ತಾಯ, ಕಚೇರಿ ನಿರ್ವಾಹಕ ಚಂದ್ರಶೇಖರ್ ಭಟ್, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ದೇವಳದಲ್ಲಿ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಕಿರುವಾಳು ಎದುರುಗೊಳ್ಳುವ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ದೇವಳದ ಆಡಳಿತಾಧಿಕಾರಿ ಹನುಮ ರೆಡ್ಡಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ರವೀಂದ್ರ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ದೇವಳದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ದೇವಳದ ಮಾಜಿ ಅಡಳಿತ ಮೋಕೇಸರ ಎನ್.ಕೆ.ಜಗನ್ನಿವಾಸ ರಾವ್, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ನ ಅಚ್ಚುತ ಮೂಡೆತ್ತಾಯ, ಉತ್ಸವ ಸಮಿತಿಯ ಪ್ರಮುಖರಾದ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಮಾಜಿ ನಗರಸಭಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಸುದೇಶ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ, ನಳಿನಿ ಪಿ ಶೆಟ್ಟಿ, ಅಮರನಾಥ ಗೌಡ ಬಪ್ಪಳಿಗೆ, ಮುಖೇಶ್ ಕೆಮ್ಮಿಂಜೆ, ಪಿ.ವಿ.ದಿನೇಶ್, ಸುಭಾಷ್ ರೈ ಬೆಳ್ಳಿಪ್ಪಾಡಿ, ಮಹಾಬಲ ರೈ ಒಳತ್ತಡ್ಕ, ನಯನಾ ರೈ, ಗಣೇಶ್ ಶೆಟ್ಟಿ ಕೆ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕರುಣಾಕರ ರೈ ದೇರ್ಲ, ನಿರಂಜನ್ ರೈ, ಉಮೇಶ್ ಆಚಾರಿ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ದೇವಳದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದಾಸ ಗೌಡ, ಶೇಖರ ನಾರಾವಿ, ರಾಮಚಂದ್ರ ಕಾಮತ್, ಡಾ.ಸುಧಾ ಎಸ್.ರಾವ್, ವೀಣಾ ಬಿ.ಕೆ., ಕೆ.ಎಸ್.ರವೀಂದ್ರನಾಥ ರೈ ಬಿ.ಐತ್ತಪ್ಪ ನಾಯ್ಕ, ಹೆಚ್, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ನಗರಸಭಾ ನಿಕಟಪೂರ್ವ ಅಧ್ಯಕ್ಷತೆ ಜೀವಂಧರ್ ಜೈನ್, ಮಾಧವ ಗೌಡ ಕಾಂತಿಲ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ದೇವಳದ ಮಾಜಿ ಮೊಕ್ತೇಸರರಾದ ಚಿದಾನಂದ ಬೈಲಾಡಿ, ರಮೇಶ್ ಬಾಬು, ಮಾಜಿ ಸದಸ್ಯರಾದ ನಯನಾ ರೈ, ಸಂತೋಷ್ ಕುಮಾರ್, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಮಾಜಿ ಪುರಸಭಾಧ್ಯಕ್ಷ ಲೋಕೇಶ್ ಹೆಗ್ಡೆ, ಮಾಜಿ ಉಪಾಧ್ಯಕ್ಷ ಹೆಚ್.ಉದಯ, ತಾ.ಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕುಂಜೂರು ಶ್ರೀ ದುಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿಶ್ವನಾಥ ಕುಲಾಲ್, ಶ್ರೀ ಕ್ಷೇ.ಧ.ಗ್ರಾ.ಯೋ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಭೂನ್ಯಾಯ ಮಂಡಳಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ರತ್ನಾಕರ ನ್ಯಾಕ್, ಕಿಟ್ಟಣ್ಣ ಗೌಡ, ರಾಧಾಕೃಷ್ಣ ನಂದಿಲ, ಶ್ರೀಧರ್ ಪಟ್ಟ, ಉದ್ಯಮಿ ಶಿವಪ್ರಸಾದ್ ಶೆಟ್ಟಿ, ಸುದೇಶ್ ಚಿಕ್ಕಪುತ್ತೂರು, ಹರಿಣಾಕ್ಷಿ ಜೆ ಶೆಟ್ಟಿ, ಭಾಸ್ಕರ್ ಬಾರ್ಯ ಮತ್ತಿತರರು ಪಾಲ್ಗೊಂಡಿದ್ದರು. ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಚಂದ್ರಶೇಖರ್ ಪಿ.ಜಿ, ಗಣೇಶ್ ಕೆದಿಲಾಯ, ದೇವಳದ ಪರಿಚಾಕರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನಿರಂಜನ್ ರೈ ಮಠಂತಬೆಟ್ಟು, ರಾಜೇಶ್ ಬನ್ನೂರು, ಸುರೇಶ್ ಶೆಟ್ಟಿ, ಹರಿಣಿ ಪುತ್ತೂರಾಯ ಅವರು ಮಾಹಿತಿ ಕೇಂದ್ರದಲ್ಲಿ ಉದ್ಘೋಷಕರಾಗಿ ಸಹಕರಿಸಿದರು.
ಬಲ್ನಾಡು ಭಂಡಾರದ ಮನೆಯಿಂದಲೇ ಸುದ್ದಿಯಲ್ಲಿ ನೇರ ಪ್ರಸಾರ
ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಕಿರುವಾಳು ಆಗಮನವನ್ನು ಇದೇ ಮೊದಲ ಬಾರಿಗೆ ಸುದ್ದಿ ನ್ಯೂಸ್ ಪುತ್ತೂರು ಯು ಟ್ಯೂಬ್ ಚಾನೆಲ್‌ನಲ್ಲಿ ಬಲ್ಪಾಡು ಭಂಡಾರದ ಮನೆಯಿಂದಲೇ ನೇರಪ್ರಸಾರ ಮಾಡಲಾಗಿತ್ತು. ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥ ಮಂದಿರದ ಎದುರು ಬೃಹತ್ ಎಲ್‌ಇಡಿ ಪರದೆ ಮೂಲಕವೂ ನೇರಪ್ರಸಾರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.