ಪುತ್ತೂರು ಜಾತ್ರೆ – ಬ್ರಾಹ್ಮೀ ಮುಹೂರ್ತದಲ್ಲಿ ಕೆರೆ ಆಯನ

0

ಪುತ್ತೂರು:ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯಲ್ಲಿ ಎ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಆಗಮನವಾದ ಬಳಿಕ ರಾತ್ರಿ ವೈಭವದ ಉತ್ಸವ ನಡೆದು ಎ.17ರ ಬ್ರಾಹ್ಮೀ ಮುಹೂರ್ತದಲ್ಲಿ ಕೆರೆ ಆಯನ ನಡೆಯಿತು.

ನೂತನ ಶಿಲಾಮಯ ಮಂಟಪದಲ್ಲಿ ಶ್ರೀ ದೇವರು ಪೂಜೆ ಸ್ವೀಕರಿಸಿದರು. ಉಳ್ಳಾಲ್ತಿ ಕಿರುವಾಳು ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಪಾಲಕಿ ಉತ್ಸವದಲ್ಲಿ ಉಡಿಕೆ, ಚೆಂಡೆ, ವಾದ್ಯ, ಕೊಂಬು, ಶಂಖ, ಭಜನೆ ಸುತ್ತು ನಡೆಯಿತು. ಬಳಿಕ ದೇವಳದ ಹೊರಾಂಗಣದಲ್ಲಿ ಹೂತೇರು, ಕೆರೆ ಆಯನ(ತೆಪ್ಪೋತ್ಸವ)ನಡೆಯಿತು. ಶ್ರೀ ದೇವರು ಪುಷ್ಕರಣಿಯ ಮಧ್ಯದಲ್ಲಿರುವ ನೂತನ ಶಿಲಾಮಯ ಮಂಟಪದಲ್ಲಿ ಪೂಜೆ ಸ್ವೀಕರಿಸಿದ ಬಳಿಕ ದೇವಳದ ಒಳಗೆ ಹೋಗುವ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here