ಪುತ್ತೂರು: ಸವಣೂರು ಪರಣೆ- ತುಳುಸಿಪುರಂನಲ್ಲಿ ಎ.14ರಂದು ವಿಜೃಂಭಣೆಯಿಂದ ವಿಸು ಹಬ್ಬದ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶ್ರೀ ದೇವಿ ಸೇವಾ ಸಮಿತಿ ತುಳುಸಿಪುರಂ ಪರಣೆ, ಸವಣೂರು ಬೊಳ್ಳಿ ಬೊಲ್ಪು ತುಳುಕೂಟ, ಸವಣೂರು ಯುವಕ ಮಂಡಲ, ಪಾದೆಬಂಬಿಲ ಶ್ರೀ ದುರ್ಗಾ ಭಜನಾ ಮಂಡಳಿ, ದೇವಸ್ಯ ಶ್ರೀ ಹರಿ ಭಜನಾ ಮಂಡಳಿ, ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿ ಹಾಗೂ ಸವಣೂರು ಶ್ರೀ ಶಾರದಾಂಬಾ ಭಜನಾ ಮಂಡಳಿಯ ವತಿಯಿಂದ ಜರಗಿದ ವಿಷು ಆಚರಣೆ ಕಾರ್‍ಯಕ್ರಮದಲ್ಲಿ ವಿಷು ಕಣಿಯನ್ನು ಇಡಲಾಯಿತು. ಬಳಿಕ ವಿವಿಧ ಭಜನಾ ತಂಡಗಳಿಂದ ಭಜನೆ ಹಾಗೂ ಕ್ರೀಡಾ ಕೂಟವನ್ನು ನಡೆಸಲಾಯಿತು.
ಸಮಾರಂಭದಲ್ಲಿ ವಿವಿಧ ಸಮಿತಿಗಳ ಪ್ರಮುಖರಾದ ಪದ್ಮಯ್ಯ ಗೌಡ ಪರಣೆ, ಗಿರಿಶಂಕರ್ ಸುಲಾಯ ದೇವಸ್ಯ, ತಾರಾನಾಥ ಕಾಯರ್ಗ, ಕುಂಜಾಡಿ ಪ್ರಕಾಶ್ಚಂದ್ರ ರೈ, ಸಂಪತ್ ಕುಮಾರ್ ಇಂದ್ರ, ಉಮಾಪ್ರಸಾದ್ ರೈ ನಡುಬೈಲು, ರಾಜೇಶ್ ರೈ ಮುಗೇರು, ಶ್ರೀಧರ್ ಸುಣ್ಣಾಜೆ, ಗಂಗಾಧರ ಸುಣ್ಣಾಜೆ, ಚಂದ್ರಾವತಿ ಸುಣ್ಣಾಜೆ, ಪುಟ್ಟಣ್ಣ ಪರಣೆ ಸಹಿತ ನೂರಾರು ಮಂದಿ ಭಾಗವಹಿಸಿದ್ದರು.