ನನ್ನ ಜೊತೆಗಿದ್ದವರ ಸುಮಾರು 150 ಮತ ಬಿಜೆಪಿಗೆ ಹಾಕಿಸುತ್ತೆನೆ – ಸೋಮಪ್ಪ ಪೂಜಾರಿ
ಪುತ್ತೂರು: ಬಜತ್ತೂರು ಕಾಂಗ್ರೆಸ್‌ನ 2ನೇ ಬೂತ್‌ನ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತ ಸೋಮಪ್ಪ ಪೂಜಾರಿ ಮತ್ತು ಬಜತ್ತೂರು ಗ್ರಾ.ಪಂ ಮಾಜಿ ಸದಸ್ಯರಾಗಿರುವ ಅವರ ಪತ್ನಿ ಲೀಲಾವತಿ ಅವರು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಸೋಮಪ್ಪ ಪೂಜಾರಿ ಅವರಿಗೆ ಪಕ್ಷದ ಶಾಲು ಹೊದೆಸಿ ಪಕ್ಷಕ್ಕೆ ಬರಮಾಡಿಕೊಂಡರು. ಮಾಜಿ ಶಾಸಕ ಸಂಜೀವ ಮಠಂದೂರು, ದ.ಕ ಜಿಲ್ಲಾ ಬಿಜೆಪಿ ಚುನಾವಣಾ ಉಸ್ತುವಾರಿ ಸುಲೋಚನಾ ಭಟ್, ಬಿಜೆಪಿ ವಿಧಾನಸಭಾ ಸಭಾ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಸೋಮಪ್ಪ ಪೂಜಾರಿ ಅವರಿಗೆ ಪಕ್ಷದ ಧ್ವಜ ನೀಡಿದರು. ಈ ಸಂದರ್ಭ ಮಂಗಳೂರು ಲೋಕಸಭಾ ಚುನಾವಣಾ ಉಸ್ತುವಾರಿ ನಿತಿನ್ ಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ ಜೀವಂಧರ್ ಜೈನ್, ರಾಜ್ಯ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಆರ್ ಸಿ ನಾರಾಯಣ, ಜಿಲ್ಲಾ ಎಸ್ಟಿ ಮೋರ್ಚಾದ ಅಧ್ಯಕ್ಷ ಹರೀಶ್ ಬಿಜತ್ರೆ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಯುವರಾಜ್ ಪೆರಿಯತ್ತೋಡಿ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಉಪ್ಪಿನಂಗಡಿ ಶಕ್ತಿ ಕೇಂದ್ರದ ಅಧ್ಯಕ್ಷ ಮುಕುಂದ ಬಜತ್ತೂರು, ಮೂಡಬಿದ್ರೆ ಚುನಾವಣಾ ಉಸ್ತುವಾರಿ ಚಂದ್ರಶೇಖರ್ ರಾವ್ ಬಪ್ಪಳಿಗೆ, ಬಾಲಕೃಷ್ಣ ಭಟ್ ಕೆದಿಲ, ಪುನಿತ್ ಮಾಡತ್ತಾರು, ನಾಗೇಶ್ ಟಿ ಎಸ್, ಸುನಿಲ್ ದಡ್ಡು, ರಾಜೇಶ್ ಪರ್ಪುಂಜ, ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಸುರೇಶ್ ಅತ್ರಮಜಲು, ಮನೋಹರ್ ಪೆರುವಾಯಿ, ಬಜತ್ತೂರಿನ ವಸಂತ ಗೌಡ ಪಿಜಕಳ, ಸಂತೋಷ್ ಪರಂದ್ಲಾಜೆ, ಜನಾರ್ದನ ಶೇಡಿ, ಉಮೇಶ್, ರೋಹಿತ್ ಮತ್ತಿತರರು ಉಪಸ್ಥಿತರಿದ್ದರು.
ನನ್ನ ಜೊತೆಗಿದ್ದವರಿಂದ 150 ಮತ ಬಿಜೆಪಿಗೆ ಹಾಕಿಸುತ್ತೇನೆ
ನಾನು ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 30 ವರ್ಷ ಕಾರ್ಯಕರ್ತನಾಗಿ ಮತ್ತು 2ನೇ ಬೂತ್‌ನ ಅಧ್ಯಕ್ಷನಾಗಿ ಸೇವೆ ನೀಡಿದ್ದೆ. ಆದರೆ ಆ ಪಕ್ಷದಲ್ಲಿ ನನ್ನನ್ನು ಕಡೆಗಣಿಸಿದ್ದಾರೆ. ಇಂತಹ ಸಂದರ್ಭದಲ್ಲಿ ನರೇಂದ್ರ ಮೋದಿಯವರ ಉತ್ತಮ ಆಡಳಿತ ನನಗೆ ಹಿಡಿಸಿದೆ. ಹಾಗೆ ಆ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದ್ದೇನೆ. ನನ್ನೊಂದಿಗೆ ನನ್ನ ಪತ್ನಿ ಪಂಚಾಯತ್‌ನ ಮಾಜಿ ಸದಸ್ಯೆ ಲೀಲಾವತಿ ಮತ್ತು ನನ್ನ ಮಗ, ಸೊಸೆ ಸಹಿತ ಸುಮಾರು ನನ್ನ ಜೊತೆಗಿರುವ ಸುಮಾರು 150 ಮತವನ್ನು ಬಿಜೆಪಿಗೆ ಹಾಕಿಸುತ್ತೇನೆ.
-ಸೋಮಪ್ಪ ಪೂಜಾರಿ