ದರ್ಬೆ ಆಶೀರ್ವಾದ್ ಎಂಟರ್‌ಪ್ರೈಸಸ್ ಲಕ್ಕೀ ಸ್ಕೀಂನ ಎರಡನೇ ಡ್ರಾ

0

ಬಂಪರ್ ಡ್ರಾ.ಬಹುಮಾನ ರೂ.50 ಸಾವಿರ ನಗದು
ಮೂವರಿಗೆ ಅಂಡ್ರಾಯ್ಡ್ ಮೊಬೈಲ್, 50 ಮಂದಿಗೆ ಸರ್ಪ್ರೈಜ್ ಬಹಮಾನ

ಪುತ್ತೂರು: ದರ್ಬೆ ಮೊಯಿದೀನ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಆಶೀರ್ವಾದ್ ಎಂಟರ್‌ಪ್ರೈಸಸ್ ಆಯೋಜಿಸಿರುವ ಲಕ್ಕೀ ಸ್ಕೀಂ ಯೋಜನೆಯ ಎರಡನೇ ಕಂತಿನ ಡ್ರಾ ಎ.15ರಂದು ನಡೆಯಿತು.

ಬಂಪರ್ ಡ್ರಾ ವಿಜೇತರಾದ ಬಿ.ಸಿ.ರೋಡ್‌ನ ಅಬ್ದುಲ್ ಹಮೀದ್ ರೂ.50 ಸಾವಿರ ನಗದು ಪಡೆದುಕೊಂಡರು. ಮಂಗಳೂರಿನ ರಘು, ಮರೀಲ್‌ನ ಅಫ್ಸಲ್ ಹಾಗೂ ಸುಳ್ಯದ ಚಿಂತನ್‌ರವರು ಮೊದಲ ಮೂರು ಅಂಡ್ರಾಯ್ಡ್ ಮೊಬೈಲ್ ವಿಜೇತರಾಗಿ ಆಯ್ಕೆಯಾದರು. ಅಲ್ಲದೆ 50 ಮಂದಿ ಸರ್ಪ್ರೈಸ್ ಬಹುಮಾನಗಳ ವಿಜೇತರಾಗಿ ಆಯ್ಕೆಗೊಂಡರು. ಶಬೀರ್ ಕೂರ್ನಡ್ಕ ಬಂಪರ್ ಡ್ರಾ ವಿಜೇತರನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿದರು. ಗ್ರಾಹಕರುಗಳಾದ ಮೋಹನ್ ಕೆ. ಕೆಎಸ್‌ಆರ್‌ಟಿಸಿ, ಕೃಷ್ಣ ನಾಯ್ಕ ಜಿಡೆಕಲ್ಲು ಹಾಗೂ ಗಂಗಾಧರ್‌ರವರು ಇತರ ಡ್ರಾ ವಿಜೇತರನ್ನು ಆಯ್ಕೆ ಮಾಡಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here