ಈ ಬಾರಿ ಬೆಜೆಪಿಯವರ ಷಡ್ಯಂತ್ರ ನಡೆಯುವುದಿಲ್ಲ: ಕಾಂಗ್ರೆಸ್ ಗೆಲ್ಲಲಿದೆ ಮಮತಾ ಗಟ್ಟಿ ವಿಶ್ವಾಸ

0

ಕಡಬ: ಬಿಜೆಪಿಯವರು ಜಾತಿ ಧರ್ಮಗಳ ಮಧ್ಯೆ ಕಂದಕ ಸೃಷ್ಠಿಸಿ ಭಾವನಾತ್ಮಕ ವಿಚಾರಗಳನ್ನೇ ಬಂಡವಾಳ ಮಾಡಿಕೊಂಡು ಪ್ರತೀ ಚುನಾವಣೆಯಲ್ಲಿ ಗೆಲ್ಲುವ ಷಡ್ಯಂತ್ರ ಮಾಡಿಕೊಂಡು ಬರುತ್ತಿದ್ದರು ಆದರೆ ಈ ಬಾರಿ ಅವರ ಆಟ ನಡೆಯುವುದಿಲ್ಲ, ಜಾಗೃತ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರನ್ನು ಗೆಲ್ಲಿಸಲಿದ್ದಾರೆ, ದೇಶದಲ್ಲಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ರಾಜ್ಯ ಗೇರು ಅಭಿವೃಧಿ ನಿಗಮದ ಅಧ್ಯಕ್ಷೆ , ಸುಳ್ಯ ಕಾಂಗ್ರೆಸ್ ಉಸ್ತುವಾರಿ ಮಮತಾ ಗಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.  

ಅವರು ಗುರುವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 33 ವರ್ಷದಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಸಂಸದರು ಗೆದ್ದು ಬಂದರೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಈ ಹಿಂದೆ ಜಾನಾರ್ಧನ ಪೂಜಾರಿ ಸೇರಿದಂತೆ ಕಾಂಗ್ರೆಸ್ ಸಂಸದರು  ಇದ್ದಾಗ ಬಂದರು, ರೈಲ್ವೆಗಳ ಅಭಿವೃದ್ಧಿ,  ವಿವಿಧ ಕಂಪೆನಿಗಳ ಅನುಷ್ಟಾನವಾಗಿದೆ, ಆದರೆ ಬಿಜೆಪಿ ಸಂಸದರ ಅವಧಿಯಲ್ಲಿ ಇದ್ಯಾವುದು ನಡೆದಿಲ್ಲ ಎಂದು ಆರೋಪಿಸಿದರು. ಈ ದೇಶದಲ್ಲಿ ಸಂವಿಧಾನ, ಜಾತ್ಯಾತೀತತೆ ಉಳಿಯಬೇಕಾದರೆ, ದೇಶ ಉಳಿಯಬೇಕಾದರೆ ಸದೃಢ , ಸುಸ್ತಿರ ಸರಕಾರ  ಬರಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಾಗಿದೆ, ಬಿಜೆಪಿಯವರು ಕೇವಲ  ಕೋಮು ಭಾವನೆಗಳನ್ನು ಕೆರಳಿಸಿ ಭಾಷಣ ಬಿಗಿದು ಅಧಿಕಾರಕ್ಕೆ ಬಂದ ಬಿಜೆಪಿ ದೇಶದ ಬಡ ಜನರನ್ನು ಬಡವರನ್ನಾಗಿ ಮಾಡಿದೆ. ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ದೇಶದ ಪ್ರತಿಯೊಬ್ಬರ  ಖಾತೆಗೆ ಹಾಕುತ್ತೇವೆ, ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂಬಿತ್ಯಾದಿ ಸುಳ್ಳುಗಳನ್ನು ಹೇಳಿ ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದ ಬಿಜೆಪಿ ದೇಶದಲ್ಲಿ ಬಡವರಿಗಾಗಿ,  ನಿರುದ್ಯೋಗಿಗಳಿಗಾಗಿ ಏನನ್ನೂ ಮಾಡಿಲ್ಲ. ಗ್ಯಾಸ್ ಬೆಲೆ , ಆಹಾರ ಬೆಲೆಗಳನ್ನು ಕಡಿಮೆ ಮಾಡುತ್ತೇವೆ ಎಂದು ಭರವಸೆ ನೀಡಿ  ಮತಗಿಟ್ಟಿಸಿದೆ. ಆಹಾರ ಧಾನ್ಯಗಳ ಬೆಲೆ, ಗ್ಯಾಸ್ ಬೆಲೆ  ಗಗನಕ್ಕೆ ಏರಿಸಿದ್ದಾರೆ.  ಜನಧನ್ ಖಾತೆಯನ್ನು ತೆರೆದು ಬಡವರ 35 ಸಾವಿರ ಕೋಟಿ ರೂವನ್ನು ಸರಕಾರ ಲೂಟಿ ಮಾಡಿದೆ. ನೋಟ್ ಬ್ಯಾನ್ ಎನ್ನುವ ನಾಟಕ ಮಾಡಿ ಅದರಲ್ಲಿ 16 ಲಕ್ಷ ಕೋಟಿ ಹಣವನ್ನು  ಸರಕಾರ ಪೋಲು ಮಾಡಿದೆ. ಇದು ದೇಶಕ್ಕೆ ಮಾಡಿದ ಮಹಾ ದ್ರೋಹವಾಗಿದೆ.ನರೇಗಾದಂತಹ ಯೋಜನೆಯನ್ನು ಜಾರಿಗೆ ತಂದ ಕಾಂಗ್ರೆಸ್ ಬಡವರ ಕೈಗೆ ಉದ್ಯೋಗ ನೀಡಿದೆ.  ಕೊರೋನಾ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಕೇರ್ ಫಂಡ್ ಗೆ ಜನ ಕೊಟಿಗಟ್ಟಲೆ ಹಣ ಹಾಕಿದ್ದಾರೆ  ಅದರ ಲೆಕ್ಕಚಾರವನ್ನು ನೀಡಿಲ್ಲ. ಜಿಎಸ್‌ಟಿ ಜಾರಿ ತಂದು ದೇಶದ ಜನರನ್ನು ಲೂಟಿ ಮಾಡಲಾಗಿದೆ. ನಮ್ಮ ರಾಜ್ಯಕ್ಕೆ ನೀಡುವ ಪಾಲಿನ ವಿಚಾರದಲ್ಲಿ  ಕೇಂದ್ರ ಸರಕಾರ ಮೋಸ ಮಾಡಿದೆ.  ಈ ಎಲ್ಲಾ ಅಂಶಗಳನ್ನು ದೇಶದ ಜನ ಗಮನಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿ ಭರವಸೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದೆ. ಇದಿಗ ನಾವು 25 ಗ್ಯಾರಂಟಿ ಯೊಂದಿಗೆ ಜನರ ಮುಂದೆ ಹೋಗುತ್ತಿದೇವೆ, ಇದರಿಂದ ಜನ ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿರುವುದು ಎಲ್ಲೆಡೆ ಕಂಡು ಬರುತ್ತಿದೆ, ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ, ಪಾಲುದಾರಿಕೆ ನ್ಯಾಯ ವಿಚಾರದೊಂದಿಗೆ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಹೇಳಿದ ಮಮತಾ ಗಟ್ಟಿ  ದ.ಕ ಲೋಕಸಭಾ ಕ್ಷೇತ್ರದಲ್ಲಿನ ಪದ್ಮರಾಜ್ ಆರ್ ಪೂಜಾರಿ ಒಬ್ಬ  ಸಮರ್ಥ ಅಭ್ಯರ್ಥಿಯಾಗಿದ್ದು ಇವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. 

ಇಂದು ಸಂಜೆ ಕಡಬದಲ್ಲಿ ಮತಯಾಚನೆ
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ ನಮ್ಮ  ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರು ಎಪ್ರಿಲ್ 18 ನೇ ಶುಕ್ರವಾರ  ಸಂಜೆ ಮೂರು ಗಂಟೆಗೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ,  ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದು ಬಳಿಕ ಸುಬ್ರಹ್ಮಣ್ಯ ಪೇಟೆಯಲ್ಲಿ ಮತಯಾಚನೆ ಮಾಡಲಿದ್ದಾರೆ.  ಬಳಿಕ ಕಡಬ ಪೇಟೆಯಲ್ಲಿ ರೋಡ್ ಶೋ ಮಾಡಿ ಬಹಿರಂಗ ಸಭೆ ನಡೆಸಲಿದ್ದಾರೆ.ಸಂಜೆ  ಸವಣೂರು ಹಾಗೂ ಕಾಣಿಯೂರು ಪೇಟೆಯಲ್ಲಿ ಮತಯಾಚನೆ ಮಾಡಿ ಸವಣೂರಿನಲ್ಲಿ ಬಹಿರಂಗ ಸಭೆ ನಡೆಸಿಲಿದ್ದಾರೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಕಡಬ ಬ್ಲಾಕ್ ಚುನಾವಣಾ ಪ್ರಚಾರ ಸಮಿತಿಯ ಉಸ್ತುವಾರಿ ಬಾಲಕೃಷ್ಣ ಗೌಡ ಬಳ್ಳೇರಿ, ಸಂಯೋಜಕ ಪಿ.ಪಿ.ವರ್ಗೀಸ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಸರ್ವೋತ್ತಮ ಗೌಡ, ಡಿ.ಸಿ.ಸಿ ಉಪಾಧ್ಯಕ್ಷ ವಿಜಯಕುಮಾರ್ ರೈ ಕರ್ಮಾಯಿ, ಪ್ರಧಾನ ಕಾರ್ಯದರ್ಶಿ ಸೈಮನ್ ಸಿ.ಜೆ.,  ಕಡಬ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ದಿನೇಶ್, ಮಾಜಿ ಅಧ್ಯಕ್ಷೆ ಉಷಾ ಅಂಚನ್,  ಗೀತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here