





ಉಪ್ಪಿನಂಗಡಿ: ಚಾಲಕನ ಅಜಾಗರೂಕತೆಯಿಂದ ಕಾರೊಂದು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡು, ಅವರಲ್ಲಿದ್ದ ಅವರ ಪುತ್ರ ಗಾಯಗಳಿಲ್ಲದೆ ಪಾರಾದ ಘಟನೆ ಉಪ್ಪಿನಂಗಡಿಯ ಸಿಟಿ ಲ್ಯಾಂಡ್ ಬಳಿ ನಡೆದಿದೆ.


ಆರೋಪಿ ಸಮೀರ್ ಎಂಬಾತ ಎ.18ರಂದು ಸಂಜೆ ಕೆಎ.19. ಎಂ.ಎ. 9626 ನೋಂದಣಿ ನಂಬ್ರದ ರಿಡ್ಜ್ ಕಾರನ್ನು ಸಿಟಿ ಲ್ಯಾಂಡ್ ಹೊಟೇಲ್ ಕಡೆಯಿಂದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ವಿಶ್ವನಾಥ್ ಎಂಬವರು ಅವರ ಮಗ ಗಗನ್ ಎಂಬಾತನನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿ ಪೇಟೆ ಕಡೆಯಿಂದ ಗಾಂಧಿಪಾರ್ಕ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬುಲೆಟ್ ಬೈಕ್ ಸಮೇತ ಸವಾರರು ರಸ್ತೆಗೆ ಬಿದ್ದಿದ್ದು, ವಿಶ್ವನಾಥ್ ಎಂಬವರು ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಗಗನ್ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಈ ಬಗ್ಗೆ ಧನಂಜಯ ಎಚ್. ಅವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












