ಅರಿಯಡ್ಕ: ಜಾರತ್ತಾರುನಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ

0

ಪುತ್ತೂರು: ಎ.19ರಂದು ರಾತ್ರಿ ವೇಳೆ ಬೀಸಿದ ಗಾಳಿಗೆ ಮರವೊಂದು ಮನೆ ಮೇಲೆ ಬಿದ್ದು ಮನೆಗೆ ಹಾನಿಯಾದ ಘಟನೆ ಅರಿಯಡ್ಕ ಗ್ರಾಮದಿಂದ ವರದಿಯಾಗಿದೆ.

ಅರಿಯಡ್ಕ ಗ್ರಾಮದ ಜಾರತ್ತಾರು ನಿವಾಸಿ ಸಿದ್ದೀಕ್ ಎಂಬವರ ಮನೆಗೆ ಮರ ಬಿದ್ದಿದ್ದು ಮನೆಯ ಶೀಟುಗಳು ಮುರಿದು ಹೋಗಿದ್ದು ಮನೆಯ ಗೋಡೆಗೆ ಹಾನಿ ಸಂಭವಿಸಿದೆ. ಸುಮಾರು 50 ಸಾವಿರ ರೂ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಘಟನೆ ಕುರಿತು ಅರಿಯಡ್ಕ ಗ್ರಾಮ ಆಡಳಿತಾಧಿಕಾರಿಯವರಿಗೆ ಮಾಹಿತಿ ನೀಡಲಾಗಿದೆ.

LEAVE A REPLY

Please enter your comment!
Please enter your name here