ನಾಳೆಯಿಂದ(ಎ.22) ಎ.ವಿ.ಜಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರ

0

ಪುತ್ತೂರು: ಬನ್ನೂರು ಕೃಷ್ಣನಗರ ಅಲುಂಬುಡದಲ್ಲಿರುವ ಎ.ವಿ.ಜಿ. ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಎ.22ರಿಂದ ಒಂದು ವಾರದ ಬೇಸಿಗೆ ಶಿಬಿರ ಆರಂಭಗೊಳ್ಳಲಿದೆ.


ಪ್ರತಿ ದಿನ ಬೆಳಿಗ್ಗೆ ಗಂಟೆ 10 ರಿಂದ ಸಂಜೆ ಗಂಟೆ 4ರ ತನಕ ಬೇಸಿಗೆ ಶಿಬಿರ ನಡೆಯಲಿದ್ದು, ಶಿಬಿರದಲ್ಲಿ ಆಟೋಟಗಳು, ಚಿತ್ರಕಲೆ, ಕ್ರಾಫ್ಟ್, ಶಿಶುಗೀತೆ, ನಾಟಕ ಸಹಿತ ಹಲವು ಕಲಾತ್ಮಕ ರಚನೆಗಳನ್ನು ಕಳುಹಿಸಿಕೊಡಲಾಗುವುದು. ಸಂಪನ್ಮೂಲ ವ್ಯಕ್ತಿಗಳಾದ ಧನಂಜಯ ಮರ್ಕಂಜ, ಪ್ರವೀಣ್ ವರ್ಣಕುಟೀರ, ದಿನೇಶ್, ಪ್ರಭಾ ಹೆಚ್, ಉಲ್ಲಾಸ್ ಪೈ, ರಾಕೇಶ್ ಆಚಾರ್ಯ ಅವರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here