ಪುತ್ತೂರಿನಲ್ಲಿ ಮುಳಿಯ ಚಿನ್ನೋತ್ಸವಕ್ಕೆ ಚಾಲನೆ – ಚಿನ್ನಾಭರಣದ 4 ಹೊಸ ವಿನ್ಯಾಸಗಳ ಅನಾವರಣ

0

ಪುತ್ತೂರು: 24 ವರ್ಷಗಳ ಹಿಂದೆ ವಜ್ರರತ್ನಗಳ ಪ್ರದರ್ಶನ ಹಬ್ಬದ ಮೂಲಕ ಗ್ರಾಹಕರಿಗೆ ಹತ್ತಿರವಾದ ಪ್ರಸಿದ್ದ ಚಿನ್ನಾಭರಣ ಮಳಿಗೆಯಾದ ಪುತ್ತೂರಿನ ಮುಳಿಯ ಜ್ಯುವೆಲ್ಸ್ ನಲ್ಲಿ ಪ್ರತಿ ವರ್ಷ ನಡೆಯುವ ಚಿನ್ನೋತ್ಸವಕ್ಕೆ ಈ ಬಾರಿ ಚಿನ್ನದ ಹಬ್ಬ “ಮುಳಿಯ ಚಿನ್ನೋತ್ಸವ”ಕ್ಕೆ ಎ.22ರಂದು ಚಾಲನೆ ನೀಡಲಾಯಿತು.

ಮೇ 20ರ ತನಕ ನಡೆಯುವ ಈ ಚಿನ್ನೋತ್ಸವವನ್ನು ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಆಫ್ ಸಯನ್ಸ್‌ನ ಪ್ರೊ. ಡಾ. ಸೌಮ್ಯ ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಚಿನ್ನಾಭರಣದ ಹೊಸ ವಿನ್ಯಾಸಗಳನ್ನು ಅನಾವರಣಗೊಳಿಸಿದರು.

ಆಭರಣದಲ್ಲಿ ಹೊಸ ವಿನ್ಯಾಸದ ಆಕಾಂಕ್ಷೆಯನ್ನು ಮುಳಿಯ ಪೂರೈಸುತ್ತಿದೆ: ಪ್ರೊ. ಡಾ. ಸೌಮ್ಯ
ಮುಳಿಯ ಚಿನ್ನೋತ್ಸವವನ್ನು ಉದ್ಘಾಟಿಸಿದ ವಿವೇಕಾನಂದ ಇಂಜಿನಿಯರಿಂಗ್ ಆಫ್ ಸಯನ್ಸ್ ಇದರ ಪ್ರೊ. ಡಾ. ಸೌಮ್ಯ ಅವರು ಮಾತನಾಡಿ, ನನ್ನ ಸುಮಾರು 30 ವರ್ಷದ ಅನುಭವದಲ್ಲಿ ಮುಳಿಯ ಜ್ಯುವೆಲ್ಸ್‌ನೊಂದಿಗೆ ಉತ್ತಮ ಸಂಬಂಧವಿದೆ. ಯಾಕೆಂದರೆ ನಮ್ಮ ಕಟುಂಬ ಸಮೇತ ಇಲ್ಲಿನ ಗ್ರಾಹಕರಾಗಿದ್ದೇವೆ. ಇದಕ್ಕೆ ಕಾರಣ ಮುಳಿಯ ನಂಬಿಕೆಯನ್ನು ಉಳಿಸಿಕೊಂಡಿದೆ. ಇದರೊಂದಿಗೆ ಪ್ರತಿಯೊಬ್ಬರಿಗೂ ನನ್ನ ಆಭರಣ ಇತರರಿಗಿಂತ ಭಿನ್ನ ಹೊಸತನ ಹೊಸ ಶೈಲಿಯಲ್ಲಿರಬೇಕೆಂಬ ಆಸೆ ಇರುತ್ತದೆ. ಅದಕ್ಕೆ ತಕ್ಕಂತೆ ಮುಳಿಯ ಜ್ಯುವೆಲ್ಸ್ ಆ ಹೊಸತನದ ಆಕಾಂಕ್ಷೆಯನ್ನು ಪೂರೈಸುತ್ತಿದೆ ಎಂದ ಅವರು ಇದರ ಜೊತೆಗೆ ಸಿಬ್ಬಂದಿಗಳ ನಗುಮೊಗದ ಸೇವೆ ನಾವು ಚಿನ್ನಾಭರಣ ನೋಡಲು ಬಂದವರು ಖರೀದಿಸುವಷ್ಟರ ಮಟ್ಟಿಗೆ ಹೋಗುತ್ತೇವೆ ಎಂದರು.

ಚಿನ್ನೋತ್ಸವದಿಂದ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಲಭ್ಯ: ಕೃಷ್ಣನಾರಾಯಣ ಮುಳಿಯ

ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ಸವಗಳನ್ನು ಪುತ್ತೂರಿಗೆ ಪರಿಚಯಿಸಿದ್ದು ಮುಳಿಯದ ವಿಶೇಷತೆ. ಹಿಂದೆ ಗ್ರಾಹಕರು ಹೊಸ ಶೈಲಿಯ ಚಿನ್ನಾಭರಣ ನೋಡುವ ಆಸೆ ಇದ್ದರೂ ಅದನ್ನು ನೋಡಲು ಬರುತ್ತಿರಲಿಲ್ಲ. ಯಾಕೆಂದರೆ ಅಲ್ಲಿಗೆ ಹೋದರೆ ಏನಾದರೂ ಒಂದು ತೆಗೆದು ಕೊಳ್ಳಬೇಕಾದಿತು ಎಂಬ ಮನೋಭಾವನೆ ಇತ್ತು. ಈ ಕುರಿತು ಅರಿತ ಮುಳಿಯ ಸಂಸ್ಥೆ 2ಸಾವಿರದ ಇಸವಿಯಲ್ಲಿ ಪ್ರಥಮವಾಗಿ ವಜ್ರೋತ್ಸವ ಎಂಬ ಪ್ರದರ್ಶನವನ್ನು ಮುಳಿಯದಲ್ಲಿ ಆರಂಭಿಸಲಾಯಿತು. ಈ ಪ್ರದರ್ಶನ ಚಿನ್ನದಾಭರಣ ನೋಡುವ ಗ್ರಾಹಕರಿಗೆ ಅನುಕೂಲವಾಯಿತು. ಇದೀಗ ಅದನ್ನು ಪ್ರತಿ ವರ್ಷ ಆಚರಿಸುತ್ತಾ ಬಂದಿದ್ದೇವೆ. ಈ ಚಿನ್ನೋತ್ಸವದಲ್ಲಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಸಿಗುತ್ತಿದೆ. ಸೇವೆಗಳು ಉತ್ತಮವಾಗಿರುತ್ತದೆ. ಪ್ರತಿಬಾರಿ ಹೊಸತನವನ್ನು ಪರಿಚಯಿಸುವುದು ನಮ್ಮ ವಿಶೇಷ. ಅದನ್ನು ಈ ಬಾರಿಯೂ ಮಾಡಿದ್ದೇವೆ. ಈ ಬಾರಿಯೂ 4 ವಿಶೇಷ ಹೊಸ ಶೈಲಿಯ ಆಭರಣವನ್ನು ಗ್ರಾಹಕರಿಗೆ ಪರಿಚಯ ಮಾಡಲಿದ್ದೇವೆ. ಹಾಗಾಗಿ ಗ್ರಾಹಕರು ಈ ಚಿನ್ನೋತ್ಸವದ ಪ್ರಯೋಜವನ್ನು ಪಡೆಯುವಂತೆ ವಿನಂತಿಸಿದರು.

ಮುಳಿಯ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೌಮ್ಯ ಅತಿಥಿಯನ್ನು ಗೌರವಿಸಿದರು. ಪೂಜಿತಾ ಪ್ರಾರ್ಥಿಸಿದರು. ಸಹಪ್ರಭಂದಕ ಯತೀಶ್ ಸ್ವಾಗತಿಸಿದರು. ಪ್ಲೋರ್ ಮೆನೆಜರ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಆನಂದ ಕುಲಾಲ್ ವಂದಿಸಿದರು. ಪ್ರಬಂಧಕ ರಾಘವೇಂದ್ರ ಪಾಟೀಲ್, ಪ್ರೊಡಕ್ಟ್ ಮೆನೇಜರ್ ಪ್ರಶಾಂತ್, ಸಂಜೀವ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here