





ಪುತ್ತೂರು: ಲೋಕಸಭಾ ಚುನಾವಣೆ-2024ರಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರ ಪರವಾಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಕೊಯಮುತ್ತೂರು ಬಿಜೆಪಿ ಅಭ್ಯರ್ಥಿಯಾಗಿರುವ ಅಣ್ಣಾಮಲೈ ಅವರು ಪುತ್ತೂರಿನಲ್ಲಿ ರೋಡ್ ಶೋ ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ನರಿಮೊಗರು ಅರುಣ್ ಕುಮಾರ್ ಪುತ್ತಿಲ ನಿವಾಸದ ಬಳಿ ಅಣ್ಣಾಮಲೈ ಅವರನ್ನು ಸ್ವಾಗತಿಸಲಾಯಿತು. ಅರುಣ್ ಕುಮಾರ್ ಪುತ್ತಿಲ ಅವರು ಅಣ್ಣಾಮಲೈ ಅವರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.










