ಪುತ್ತೂರು ಪಶು ಆಸ್ಪತ್ರೆ ಜಾನುವಾರು ಅಭಿವೃದ್ಧಿ ಅಧಿಕಾರಿ ಹೊನ್ನಪ್ಪ ಬಿ. ಗೌಡ ಏ.30ರಂದು ಸೇವಾ ನಿವೃತ್ತಿ

0

ಪುತ್ತೂರು: ಕಳೆದ 37 ವರ್ಷಗಳಿಂದ ಪುತ್ತೂರು, ಕಡಬ ತಾಲೂಕಿನಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹೊನ್ನಪ್ಪ ಗೌಡ ರವರು ಏ.30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಬನ್ನೂರು ಜೈನರಗುರಿ ನಿವಾಸಿಯಾಗಿರುವ ಇವರು ಈ ಹಿಂದೆ ಪಾಣಾಜೆ ಮತ್ತು ಉಪ್ಪಿನಂಗಡಿಯ ಪಶು ಆಸ್ಪತ್ರೆಯಲ್ಲಿ ಪಶು ವೈದ್ಯಕೀಯ ಪರೀಕ್ಷಕರಾಗಿ, ಬೆಳಂದೂರು ಪ್ರಾ.ಪ.ಚಿ.ಕೇಂದ್ರ, ಕಾಣಿಯೂರಿನಲ್ಲಿ ಹಿರಿಯ ಪಶುವೈದ್ಯಕೀಯ ಪರೀಕ್ಷಕರಾಗಿ, ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ಜಾನುವಾರು ಅಧಿಕಾರಿಯಾಗಿ, ಪುತ್ತೂರು ಪಶು ಆಸ್ಪತ್ರೆಯಲ್ಲಿ ಜಾನುವಾರು ಅಭಿವೃದ್ಧಿ ಅಧಿಕಾರಿಯಾಗಿ, ನೆಲ್ಯಾಡಿ, ಗೋಳಿತೊಟ್ಟು, ಪೆರಾಬೆ, ಐತ್ತೂರು ಗ್ರಾ.ಪಂ.ನಲ್ಲಿ 9 ತಿಂಗಳ ಕಾಲ ಗ್ರಾ.ಪಂ. ಆಡಳಿತಾಧಿಕಾರಿಯಾಗಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ನೌಕರ ವೃಂದದ ಜಿಲ್ಲಾ ಸಂಘದಲ್ಲಿ 25 ವರ್ಷಗಳ ಕಾಲ ಖಜಾಂಜಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಬೆಂಗಳೂರು ಇದರ ಪುತ್ತೂರು ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಉತ್ತಮ ಶಟ್ಲ್ ಬ್ಯಾಡ್ಮಿಂಟನ್ ಆಟಗಾರರಾಗಿ ಹಲವು ಪ್ರಶಸ್ತಿ ಪಡೆದಿರುವ ಇವರು 75ನೇ ವರ್ಷದ ಸ್ವಾತಂತ್ಯೋತ್ಸವ ಪ್ರಯುಕ್ತ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಏರ್ಪಡಿಸಿದ “ಜನಸ್ನೇಹಿ ಅಧಿಕಾರಿ” ಆಯ್ಕೆ ಪ್ರಕ್ರಿಯೆಯಲ್ಲಿ ಇಲಾಖೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಇವರ ಪತ್ನಿ ಮಂಜುಳಾ ಎಚ್. ಗೌಡರವರು ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಗಣಿತ ಶಿಕ್ಷಕಿಯಾಗಿದ್ದು, ಪುತ್ರ ಅಕ್ಷಯ್ ಎಚ್.ಬಿ. Pristine Pearl pvt ltd ನಲ್ಲಿ Terr Manager ಆಗಿದ್ದಾರೆ. ಸೊಸೆ ಶ್ರೀಯಾ Cyeint Ltd.ನಲ್ಲಿ Data Analyst ಆಗಿದ್ದು, ಪುತ್ರಿ ಹಿಮಾ ತಿರುಮಲೇಶ್ Bangalore, Sreenidhi Souharda Sahakari Bank Niyamitha ನಲ್ಲಿBranch Manager ಆಗಿದ್ದು, ಅಳಿಯ ತಿರುಮಲೇಶ್ ಜಿ. ದೇವಸ ಹೈಕೋರ್ಟ್ ವಕೀಲರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here