ಕೋರ್ ಎಪಿಸ್ಕೊಪಾ ಪದವಿಗೇರಿದ ಕುರಿಯಾಕೋಸ್ ಕಾವನಾಟ್ಟೆಲ್‌ಗೆ ಉದನೆ ಫೋರೋನ ವತಿಯಿಂದ ಸನ್ಮಾನ

0

ನೆಲ್ಯಾಡಿ: ರೆಂಜಿಲಾಡಿ ಸೈಂಟ್ ಮೇರಿಸ್ ಜಾಕೋಬೈಟ್ ಸೂನೋರೋ ದೇವಾಲಯದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಕೋರ್ ಎಪಿಸ್ಕೋಪಾ ಪದವಿಗೇರಿದ ಕುಟ್ರುಪ್ಪಾಡಿಯ ಕಾವನಾಟ್ಟೇಲ್ ಕುಟುಂಬಕ್ಕೆ ಸೇರಿದ ರೆ.ಫಾ. ಕುರಿಯಾಕೋಸ್ ಕಾವನಾಟ್ಟೆಲ್‌ರವರನ್ನು ಉದನೆ ಸೀರೋ ಮಲಬಾರ್ ಫೋರೋನ ವತಿಯಿಂದ ರೆಂಜಿಲಾಡಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ರೆ.ಫಾ.ಕುರಿಯಯಾಕೋಸ್‌ರವರು ಸುಮಾರು 25 ವರ್ಷಗಳಿಂದ ಕಡಬ ಪ್ರದೇಶದಲ್ಲಿ ಧಾರ್ಮಿಕ ಸೇವೆಯಲ್ಲಿದ್ದಾರೆ. ಕೋರ್ ಎಪಿಸ್ಕೊಪಾ ಪದವಿ ಅವರ ಸೇವೆಗೆ ಸಮಾಜ ನೀಡಿದ ಗೌರವವಾಗಿದೆ ಎಂದು ಉದನೆ ಫೋರೋನ ಚರ್ಚ್‌ನ ಧರ್ಮಗುರು ರೆ.ಫಾ. ಸಿಬಿ ತೋಮಸ್‌ರವರು ಹೇಳಿದರು. ಧರ್ಮ ಗುರುಗಳಾದ ಫಾ. ಶಾಜಿ ಮ್ಯಾಥ್ಯು, ಫಾ.ಜೋಸ್ ಆಯಾಮ್ಕುಡಿ, ಫಾ. ಜೋಸ್ ಪೂವತ್ತಿಂಕಲ್, ಫಾ.ಶಿಬು ವರ್ಗೀಸ್, ಫಾ. ಪುದಿಯೇಡತ್ಫಾ ಡೊನೇಲ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here