ಕಲಿಕೆಗೆ ತೊಂದರೆಯಾದರೆ ನನಗೆ ಕರೆ ಮಾಡು-ಪ್ಲೇಟ್ ಶುಚಿಮಾಡುತ್ತಿದ್ದ ಬಾಲಕನಿಗೆ ಶಾಸಕ ಅಶೋಕ್ ರೈ ನೆರವಿನ ಭರವಸೆ: ಫೋಟೋ ವೈರಲ್

0

ಪುತ್ತೂರು: “ ನೀನು ಸ್ಕೂಲ್‌ಗೆ ಹೋಗುವುದಿಲ್ವ? ಏನು ಕಲಿಯುತ್ತಿದ್ದೀಯಾ? ಅಪ್ಪ ಅಮ್ಮ ಏನು ಕೆಲಸ ಮಾಡುತ್ತಾರೆ? ನೀನು ಯಾಕೆ ಈ ಕೆಲಸವನ್ನು ಮಾಡುತ್ತಿದ್ದಿಯಾ ? ಮನೆಯಲ್ಲಿ ಕಷ್ಟ ಇದೆಯಾ? ಇದು ಉಡುಪಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಎಂಜಲು ಪಾತ್ರೆ ಶುಚಿ ಮಾಡುತ್ತಿದ್ದ ಬಾಲಕನಲ್ಲಿ ಶಾಸಕರಾದ ಅಶೋಕ್ ರೈಯವರು ಕೇಳಿದ ಪ್ರಶ್ನೆ. ಅಲ್ಲಿ ಪ್ಲೇಟ್ ಶುಚಿ ಮಾಡುತ್ತಿದ್ದ ಬಾಲಕ ಯಾರೆಂಬುದೇ ಶಾಸಕರಿಗೆ ಗೊತ್ತಿಲ್ಲ. ಊಟ ಮುಗಿಸಿ ಪ್ಲೇಟ್ ಇಡಲು ಬಂದಾಗ ಬಾಲಕನ ಕೆಲಸವನ್ನು ಕಂಡು ಮರುಕಪಟ್ಟ ಶಾಸಕರು ಅವನ ಬಳಿ ಬಂದು ಮೊದಲಿಗೆ ತಲೆ ಸವರಿದರು. ಆ ಬಳಿಕ ಆತನಲ್ಲಿ ಅವನ ಮನೆಯವರ ಮಾಹಿತಿ ಪಡೆದುಕೊಂಡರು.

ʼತಾನು ಪಿಯುಸಿ ಓದುತ್ತಿದ್ದೇನೆ, ಅಪ್ಪ ಸಾರಣೆ ಕೆಲಸಕ್ಕೆ ಹೋಗುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ದಿನಂಪ್ರತಿ ಕೆಲಸಕ್ಕೆ ಹೋಗಲಾಗುತ್ತಿಲ್ಲ, ಅಮ್ಮ ಮನೆಯಲ್ಲೇ ಇರುವುದು. ನಾನು ಕ್ಯಾಟರಿಂಗ್ ಅವರ ಜೊತೆ ಕೆಲಸಕ್ಕೆ ಹೋಗುತ್ತೇನೆ ಆ ಹಣವನ್ನು ಕೂಡಿಟ್ಟು ಸ್ಕೂಲ್ ಫೀಸ್ ಕಟ್ಟುವುದಾಗಿ ಹೇಳಿದ. ಬಾಲಕನ ಕಷ್ಟ ಕೇಳಿ ಭಾವುಕರಾದ ಶಾಸಕರು ನೀನು ವಿದ್ಯೆ ಮುಂದುವರೆಸು ನಿನಗೆ ವಿದ್ಯಾಬ್ಯಾಸಕ್ಕೆ ಏನಾದರೂ ಕಷ್ಟವಾದರೆ ನನಗೆ ಕರೆ ಮಾಡು ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದರು. ಬಾಲಕನ ಜೊತೆ ಶಾಸಕರು ಮಾತನಾಡುತ್ತಿದ್ದ ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

LEAVE A REPLY

Please enter your comment!
Please enter your name here