ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಜಿಲ್ಲಾ ಮಟ್ಟದ ಪ್ರಾಥಮಿಕ ಯೋಗ ಪ್ರಶಿಕ್ಷಣ ಶಿಬಿರಗಳು ಮೇ.9 ರಿಂದ 12ರ ತನಕ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ನಡೆಯಲಿದೆ.
ಯೋಗ ಪ್ರಶಿಕ್ಷಣದಲ್ಲಿ 2 ವಿಭಾಗಳನ್ನು ಮಾಡಲಾಗಿದ್ದು, 10 ರಿಂದ 16 ವರ್ಷದ ವಯೊಮಾನದ ಮಕ್ಕಳ ವಿಭಾಗ ಮತ್ತು 17 ರಿಂದ 55 ವರ್ಷದ ಸಾಮಾನ್ಯ ವಿಭಾಗಗಳಿಗೆ ಪ್ರತ್ಯೇಕ ಶಿಬಿರಗಳು ನಡೆಯಲಿದೆ. ಮೇ 9ಕ್ಕೆ ಶಿಬಿರದ ಉದ್ಘಾಟನೆ, ಸತ್ಸಂಗ, ಮೇ .10ಕ್ಕೆ ಮಾತೃ ವಂದನಾ, ಮಾತೃ ಭೋಜನ, ಮೇ.11ಕ್ಕೆ ಆರೋಗ್ಯದ ಕಡೆಗೆ ಯೋಗ ನಡಿಗೆ, ಮೇ 12ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.