





ಕಾಣಿಯೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮದಲ್ಲಿ ಶೇಕಡಾ 100 ಫಲಿತಾಂಶ ಪಡೆದುಕೊಂಡಿದೆ. ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗವು ಸತತ 21ನೇ ಬಾರಿ ಶೇಕಡಾ 100 ಫಲಿತಾಂಶದೊಂದಿಗೆ ದಾಖಲೆ ನಿರ್ಮಿಸಿದೆ. ಕನ್ನಡ ಮಾಧ್ಯಮ ವಿಭಾಗದಲ್ಲಿ ಸತತ 15ನೇ ಬಾರಿ ಶೇಕಡಾ 100 ಫಲಿತಾಂಶದ ಸಾಧನೆ ಮಾಡಿದೆ. ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಾದ ಶ್ರಾವಣ್ಯ ಆರ್. ಎಸ್(586), ನನ್ಮಯಿ ಎಂ (580), ಪೂರ್ವಿ ಆಳ್ವ ಕೆ (579), ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾದ ಆಯಿಷತ್ ಶಿಫ( 588), ಲಾವಣ್ಯ ಡಿ ( 574), ಸನ್ವಿತ್ ಬಿ. ಎಂ ಗೌಡ (561) ಅಂಕ ಪಡೆದುಕೊಂಡಿದ್ದಾರೆ

















