ಸ್ಕಾಲರ್‌ಶಿಪ್ ಸೌಲಭ್ಯದೊಂದಿಗೆ ಪಿಯುಸಿ ಮತ್ತು ಶರೀಅತ್ ಶಿಕ್ಷಣ ಕಲಿಕೆಗೆ ಅವಕಾಶ-ಸಂಪ್ಯ ಝಹ್ರಬತೂಲ್ ವುಮೆನ್ಸ್ ಕಾಲೇಜಿನಲ್ಲಿ ದಾಖಲಾತಿ ಪ್ರಾರಂಭ

0

ಪುತ್ತೂರು: ಸಂಪ್ಯ ಕಮ್ಮಾಡಿ ಇಸ್ಲಾಮಿಕ್ ಸೆಂಟರ್ ಇದರ ಅಧೀನದಲ್ಲಿ ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಉಸ್ತಾದರ ನೇತೃತ್ವದಲ್ಲಿ ಕಾರ್ಯಚರಿಸುತ್ತಿರುವ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಝಹ್ರ ಬತೂಲ್ ವುಮೆನ್ಸ್ ಕಾಲೇಜಿನಲ್ಲಿ 2024-25 ರ ಸಾಲಿನ ದಾಖಲಾತಿ ಪ್ರಾರಂಭಗೊಂಡಿದೆ. ಸ್ಕಾಲರ್ ಶಿಫ್ ಸೌಲಭ್ಯದ ಅಝ್ಝಕಿಯ್ಯ ಬಿರುದಾಂಕಿತ ಶರೀಅತ್‌ನೊಂದಿಗೆ ರೆಗ್ಯುಲರ್ ಹಾಗೂ ಕರೆಸ್ಪಾಂಡೆಂಸ್ ಪಿಯುಸಿ, ಶರೀಅತ್ ಹಾಗೂ ಹಿಫ್ಲ್ ಮುಂತಾದ 2 ವರ್ಷಗಳ ಕೊರ್ಸುಗಳಿಗೆ ಅರ್ಹರು ಅರ್ಜಿ ಸಲ್ಲಿಸಬಹುದು.

ಶರೀಅತ್ ಮಾತ್ರ ಕಲಿಯ ಬಯಸುವವರಿಗೂ ಪ್ರತ್ಯೇಕ ಸೌಲಭ್ಯವಿರುವುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿಯೊಂದಿಗೆ ಟೈಲರಿಂಗ್, ಕ್ಯಾಲಿಗ್ರಫಿ, ಟೀಚರ್ ಟ್ರೈನಿಂಗ್ ಹಾಗೂ ಹಿಜಾಮ ಮೊದಲಾದ ಪಠ್ಯೇತರ ವಿಷಯಗಳಲ್ಲಿ ವಿಶೇಷ ತರಬೇತಿಗಳನ್ನು ನೀಡಲಾಗುವುದು. ಅನಾಥ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು.

ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸದ್ರಿ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯರು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಜಿಲ್ಲೆಯ ಹೆಸರಾಂತ ವಿದ್ಯಾ ಸಂಸ್ಥೆಯಾಗಿದೆ. ಶರೀಅತ್ ಪೂರ್ಣಗೊಳಿಸಿದವರಿಗೆ ವಿನೂತನ ಮಾದರಿಯ ಅಲ್ ಕಾಶಿಫಾ ಬಿರುದಾಂಕಿತ ಒಂದು ವರ್ಷದ ಫ್ರೊಫೆಟಿಕ್ ಮೆಡಿಸಿನ್, ಸ್ವಪ್ನ ವಾಖ್ಯಾನ ಕೊರ್ಸ್ , ನೇರವಾಗಿ ಸೆಕೆಂಡ್ ಪಿಯುಸಿ & ಡಿಗ್ರಿ ಕರೆಸ್ಪಾಂಡೆಂಸ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 7892489955, 8296070213 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here