ಉಪ್ಪಿನಂಗಡಿ: ಇಂಡಿಯನ್ ಸ್ಕೂಲ್‌ಗೆ ಶೇ.100 ಫಲಿತಾಂಶ

0

ಉಪ್ಪಿನಂಗಡಿ: ಇಲ್ಲಿನ ಮಾಲೀಕುದ್ದೀನಾರ್ ಜುಮಾ ಮಸೀದಿಯ ಆಡಳಿತಕ್ಕೊಳಪಟ್ಟ ಇಂಡಿಯನ್ ಸ್ಕೂಲ್‌ಗೆ ಎಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ಬಂದಿದೆ.
ಪರೀಕ್ಷೆಗೆ ಹಾಜರಾದ 38 ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲೂ, 28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕೆ.ಮುಹಮ್ಮದ್ ಅಝ್ಮಾಲ್ (585) ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದು, ಫಾತಿಮ ಸನಿಯ್ಯ (575) ದ್ವಿತೀಯ, ಕೆ.ಅಬೂಬಕ್ಕರ್ ಸಿದ್ದೀಕ್ (567) ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಯು.ಮುಹಮ್ಮದ್ ಶಿಬ್ಲೀ (564), ಕೆ.ಮುಹಮ್ಮದ್ ಮುನಾಝ್ (552), ಸಾಹಿರ ಬಾನು (552) ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here