ಹಿರೇಬಂಡಾಡಿ ಸರಕಾರಿ ಶಾಲೆಗೆ ಸತತ 4ನೇ ಬಾರಿಗೆ ಶೇ.100 ಫಲಿತಾಂಶ

0

ಉಪ್ಪಿನಂಗಡಿ: 2023-24 ನೇ ಸಾಲಿನ ಎಸ್‌ ಎಸ್‌ ಎಲ್‌ ಸಿ ವಾರ್ಷಿಕ ಪರೀಕ್ಷೆಯಲ್ಲಿ ಹಿರೇಬಂಡಾಡಿಯ ಸರಕಾರಿ ಪ್ರೌಢಶಾಲೆ ಸತತ ನಾಲ್ಕನೇ ಬಾರಿ ಶೇ.100 ಫಲಿತಾಂಶ ಪಡೆದುಕೊಂಡಿದೆ.
ಒಟ್ಟು 49 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 12 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, ಓರ್ವ ವಿದ್ಯಾರ್ಥಿನಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ.

ಪ್ರಿಯಾಂಕ 564(90.24 ಶೇ.), ಸಿಂಚನಾ ಎನ್ 554 (88.64 ಶೇ.), ನಿತನ್ ಕುಮಾರ್ 548( ಶೇ.87.68), ಬಿ ಸಮಿಳಾ 543(ಶೇ. 86.8), ಮನೀಶ್ ಎಂ. 543(ಶೇ.86.8), ಪ್ರಜ್ವಲ್ 533(ಶೇ. 85.2) ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

LEAVE A REPLY

Please enter your comment!
Please enter your name here