ಪುತ್ತೂರು: ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಒಂದೇ ವಾರದಲ್ಲಿ ಎರಡು ವಿಕ್ರಮಗಳನ್ನು ಸಾಧಿಸಿದೆ. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸರಕಾರಿ ಪದವಿ ಕಾಲೇಜುಗಳ ರಾಷ್ಟ್ರೀಯ ಮಟ್ಟದ ಮತ್ತು ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಚಾಂಪಿಯನ್ಸ್ ಪದಕವನ್ನು ಪಡೆದಿದೆ. ಮೇ 15 ರಂದು ಡಾ.ಶಿವರಾಮ ಕಾರಂತ ಸರಕಾರಿ ಪದವಿ ಕಾಲೇಜು ಪೆರುವಾಜೆ, ಬೆಳ್ಳಾರೆ- ಇಲ್ಲಿ ನಡೆದ ಸ್ನಾತಕೋತ್ತರ ಪದವಿ ಮಟ್ಟದ ಅಂತರ್ ಕಾಲೇಜು ‘ಎಕ್ಸಲೆನ್ಸಿಯಾ -2K2K’ ಸ್ಪರ್ಧೆಯಲ್ಲಿ ಪುತ್ತೂರಿನ ಮಹಿಳಾ ಕಾಲೇಜುಗಳ ವಿದ್ಯಾರ್ಥಿಗಳ ತಂಡ ಅಗ್ರ ಶ್ರೇಯಾಂಕ ದಾಖಲಿಸಿ ಚಾಂಪಿಯನ್ಸ್ ಗಳಾಗಿದ್ದಾರೆ .
ಈ ಸ್ಪರ್ಧೆಯಲ್ಲಿ ಕಾಲೇಜಿನ ಅಂತಿಮ ಬಿಕಾಂ ಪದವಿಯ ಆಪ್ನಾ ಬೆಸ್ಟ್ ಮ್ಯಾನೇಜರ್ ಪ್ರಶಸ್ತಿಯನ್ನು ಪಡೆದರೆ, ಫಾತಿಮಾತ್ ರಫೀಜ ಮತ್ತು ನವ್ಯಶ್ರೀ ಫೈನಾನ್ಸ್ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. ಉಳಿದ ಎಲ್ಲಾ ವಿಭಾಗಗಳಲ್ಲೂ ಗರಿಷ್ಠ ಅಂಕ ದಾಖಲಿಸಿದ ಈ ತಂಡ ಅಂತಿಮವಾಗಿ ಚಾಂಪಿಯನ್ಸ್ ಗಳಾಗಿ ಹೊರಹೊಮ್ಮಿದ್ದಾರೆ.
ತಂಡದಲ್ಲಿ ಈ ಮೇಲಿನ ವಿದ್ಯಾರ್ಥಿಗಳಲ್ಲದೆ ಶ್ರಾವ್ಯ, ಭೂಮಿಕಾ,ದೀಪಿಕಾ, ರಕ್ಷಿತಾ, ವೈಷ್ಣವಿ, ಮೋಕ್ಷಿತ ,ಚಿಂತನ, ವರ್ಷ ,ಲಕ್ಷ್ಮಿ, ಪ್ರತಿ ಕ್ಷಾ, ಯಕ್ಷಿತಾ ,ಸಾಬಿಯ, ಪ್ರತಿಕ್ಷಾ, ಸವಿತಾ, ಮನಿಷಾ, ವೀಣಾ, ವಿನುತ, ಸಿಂಚನ, ಅಖಿಲ ಸ್ಪರ್ಧಿಸಿ ಯಶಸ್ವಿಗೆ ಕಾರಣರಾಗಿದ್ದಾರೆ.
ಮಂಗಳೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ಇಲ್ಲಿ ನಡೆದ ‘ಪೋರ್ಲ- 2024 ‘ತುಳು ಜಾನಪದ ಕೂಡು ಕಟ್ಟುಗಳನ್ನು ಆಧರಿಸಿದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮತ್ತೆ ಮಹಿಳಾ ಕಾಲೇಜು ಅಗ್ರಶ್ರೀಯಂಕವನ್ನು ದಾಖಲಿಸಿ ಪ್ರಥಮ ಬಹುಮಾನದ ಪಡೆದಿದೆ. ಈ ಸ್ಪರ್ಧೆಯಲ್ಲಿ ಈ ಕೆಳಗಿನ ವಿದ್ಯಾರ್ಥಿಗಳು ಬಹು ಶ್ರೇಣಿಯಲ್ಲಿ ಸ್ಪರ್ಧಿಸಿ ಗರಿಷ್ಠ ಅಂಕವನ್ನು ಪಡೆದು ಚಾಂಪಿಯನ್ಸಿಗೆ ಕಾರಣರಾಗಿದ್ದಾರೆ. ಯಶಸ್ವಿನಿ ,ಶ್ರಾವ್ಯ, ಸಿಂಚನ, ದೀಕ್ಷಾ, ವೀಣಾ, ಸುಶ್ಮಿತ, ಮನಿಷಾ, ಸೌಮ್ಯ, ವೈಷ್ಣವಿ ,ಶ್ವೇತಾ ಬಿ ,ಸೃಜನ, ಶ್ವೇತ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು.
ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅಗ್ರ ಶ್ರೇಯಾಂಕವನ್ನು ಪಡೆದು ಸತತ ಎರಡು ಪ್ರಶಸ್ತಿಯನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಡಾ. ಗೋಪಾಲಕೃಷ್ಣ ಕೆ ಅಭಿನಂದಿಸಿದ್ದಾರೆ.